ಕರ್ನಾಟಕ

karnataka

ETV Bharat / sitara

ಪಕ್ಷ ಕಟ್ಟೋದು ಖಚಿತ, ಸಿಎಂ ಸ್ಥಾನದ ಬಗ್ಗೆ ಯೋಚಿಸಿಲ್ಲ : ತಲೈವಾ ಘೋಷಣೆ - ರಜಿನಿಕಾಂತ್​ ಸುದ್ದಿಗೋಷ್ಠಿ

ನಾನು ರಾಜಕೀಯ ಪಕ್ಷ ಕಟ್ಟುತ್ತೇನೆ. ಆದ್ರೆ ಸಿಎಂ ಆಗೋದ್ರ ಬಗ್ಗೆ ಯೋಚನೆ ಮಾಡಿಲ್ಲ ಎಂದು ರಜಿನಿಕಾಂತ್​​ ಹೇಳಿದ್ದಾರೆ.

I have never thought of the Chief Minister's post : rajini
ಪಕ್ಷ ಕಟ್ಟೋದು ಖಚಿತ, ಸಿಎಂ ಸ್ಥಾನದ ಬಗ್ಗೆ ಯೋಚಿಸಿಲ್ಲ : ತಲೈವಾ

By

Published : Mar 12, 2020, 12:24 PM IST

Updated : Mar 12, 2020, 1:04 PM IST

ಶೀಘ್ರದಲ್ಲೇ ಹೊಸ ರಾಜಕೀಯ ಪಕ್ಷವನ್ನು ಘೋಷಿಸುತ್ತೇನೆ. ಆದ್ರೆ ನಾನು ಸಿಎಂ ಬಗ್ಗೆ ಯೋಚಿಸಿಲ್ಲ ಎಂದು ತಮಿಳು ಸೂಪರ್​ಸ್ಟಾರ್​ ರಜಿನಿಕಾಂತ್​​ ಹೇಳಿದ್ದಾರೆ.

ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕರ್ತರು ಮತ್ತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಜಿನಿ, ಈ ಹಿಂದೆ ತಮಿಳುನಾಡು ರಾಜಕೀಯದಲ್ಲಿ ಇಬ್ಬರು ಪ್ರಬಲರು ಇದ್ದರು. ಒಬ್ಬರು ಜಯಲಲಿತಾ ಮತ್ತೊಬ್ಬರು ಕಲೈಗ್ನಾರ್​​. ಇವರ ನಂತರ ರಾಜ್ಯದ ರಾಜಕೀಯ ನಿರ್ವಾತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪಕ್ಷ ಕಟ್ಟೋದು ಖಚಿತ, ಸಿಎಂ ಸ್ಥಾನದ ಬಗ್ಗೆ ಯೋಚಿಸಿಲ್ಲ : ತಲೈವಾ ಘೋಷಣೆ

ನನ್ನ ರಾಜಕೀಯ ಪ್ರವೇಶದ ಬಗ್ಗೆ ಊಹಾಪೋಹದ ಸುದ್ದಿಗಳಿದ್ದವು. 1996ರಿಂದಲೂ ಇಂತಹ ಊಹೆಗಳು ಹರಿದಾಡುತ್ತಿದ್ದವು. 2017ರಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದೆ ಎಂದರು.

ನಂತರ ಮಾತನಾಡಿದ ತಲೈವಾ ಯಾವ ಸರ್ಕಾರದ ಕೆಲಸಗಳೂ ಸರಿಯಾಗಿ ನಡೆಯುತ್ತಿಲ್ಲ. ಈ ವ್ಯವಸ್ಥೆ ಬದಲಾಯಿಸುವ ಕೆಲಸವನ್ನು ನಾವು ಮಾಡುತ್ತೇವೆ. ಯುವಕರರು ರಾಜಕೀಯಕ್ಕೆ ಧುಮುಕಬೇಕು. ವ್ಯಕ್ತಿ ಕೇಂದ್ರಿತ ಸರ್ಕಾರ, ಪಕ್ಷ ಕೇಂದ್ರಿತ ರಾಜಕೀಯ ಸರಿಯಲ್ಲ ಎಂದರು.

Last Updated : Mar 12, 2020, 1:04 PM IST

ABOUT THE AUTHOR

...view details