ಬೆಂಗಳೂರು:ನಾನು ಪೊಲೀಸ್ ಕಮಿಷನರ್ ಭೇಟಿಯಾಗಿ ಮಾತಾಡ್ತೀನಿ, ಇನ್ಮುಂದೆ ಈ ವಿಚಾರವಾಗಿ ಯಾರ ಬಳಿಯೂ ಮಾತನಾಡೋಲ್ಲ. ನಿನ್ನೆ ಉಮಾಪತಿ ಜೊತೆ ಮಾತಾಡಿದ್ದೀನಿ ಎಂದು ನಟ ದರ್ಶನ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ನಾನು ಕೂಡ ಪ್ರತಿಕ್ರಿಯೆ ಕೊಟ್ಟು ಆಗಿದೆ. ಕೇಸು ಪೊಲೀಸ್ ಠಾಣೆಯಲ್ಲಿದೆ. ತನಿಖೆ ನಡೆಯುತ್ತಿದೆ, ಅಲ್ಲಿಯೇ ಇತ್ಯರ್ಥವಾಗಲಿದೆ ಎಂದರು.