ಅದ್ಭುತ ನಟನೆ ಮತ್ತು ಫಿಟ್‌ನೆಸ್‌ಗೆ ಹೆಸರುವಾಸಿಯಾಗಿರುವ ಬಾಲಿವುಡ್ ನಟ ಜಾನ್ ಅಬ್ರಾಹಂ ನಟನೆಯ ಹಾಗೂ ಲಕ್ಷ್ಯ ರೈ ಆನಂದ್ ನಿರ್ದೇಶನದ ‘ಅಟ್ಯಾಕ್’ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್, ರಾಕುಲ್ ಪ್ರೀತ್ ಸಿಂಗ್, ಜಯಂತಿ ಲಾಲ್ ಗಡ ಮುಂತಾದವರು ಭಾಗವಹಿಸಿದ್ದರು.
ಈ ಸುಪ್ರಸಿದ್ಧ ನಟನಿಗೆ ಸೋಷಿಯಲ್ ಮೀಡಿಯಾ ಬಳಕೆ ಗೊತ್ತಿಲ್ಲವಂತೆ... ಯಾರಿವರು? - ಲಕ್ಷ್ಯ ರೈ ಆನಂದ್
ಬಾಲಿವುಡ್ ನಟ ಜಾನ್ ಅಬ್ರಾಹಂ, ಜಾಕ್ವೆಲಿನ್ ಫರ್ನಾಂಡಿಸ್, ರಾಕುಲ್ ಪ್ರೀತ್ ಸಿಂಗ್, ಜಯಂತಿ ಲಾಲ್ ಗಡ ನಟನೆಯ ‘ಅಟ್ಯಾಕ್’ ಸಿನಿಮಾದ ಟ್ರೈಲರ್ ಅನ್ನು ಮುಂಬೈನಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದ್ದು, ಏಪ್ರಿಲ್ 1 ರಂದು ಸಿನಿಮಾ ತೆರೆಕಾಣಲಿದೆ.
‘ಅಟ್ಯಾಕ್’ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ
ಈ ವೇಳೆ, ಮಾತನಾಡಿದ ಜಾನ್ ಅಬ್ರಾಹಂ, ಸಾಮಾಜಿಕ ಮಾಧ್ಯಮ ತುಂಬಾ ಪವರ್ಫುಲ್ ಮೀಡಿಯಾ. ಆದರೆ ನಾನೊಬ್ಬ ಪ್ರಾಣಿ ಪ್ರೇಮಿ, ನನಗೆ ಸಾಮಾಜಿಕ ಮಾಧ್ಯಮ ಹೇಗೆ ಬಳಸಬೇಕೆಂದು ತಿಳಿದಿಲ್ಲ ಎಂದು ಹೇಳಿದರು. ಅಂದಹಾಗೆ, ‘ಅಟ್ಯಾಕ್’ ಚಿತ್ರ ಏಪ್ರಿಲ್ 1 ರಂದು ಬಿಡುಗಡೆಯಾಗಲಿದೆ.