ಕರ್ನಾಟಕ

karnataka

ETV Bharat / sitara

'ನಾನು ನಿಮಗೆ ಅಂಕಲ್ ಅನ್ನಲ್ಲ, ನೀವು ನಮ್ಮ ಹೀರೋ': ನಟಿ ಅಮೂಲ್ಯ - Actress amulya Latest News

ದರ್ಶನ್ ಅವರಿಗೆ ಅಂಕಲ್ ಅನ್ನುವ ಪರಿಪಾಠವನ್ನು ಮೊದಲಿಗೆ ಪ್ರಾರಂಭಿಸಿದ್ದು ನಟಿ ಅಮೂಲ್ಯ ಅಂತೆ. ಇದನ್ನು ಸ್ವತಃ ದರ್ಶನ್ ಹೇಳಿದ್ದಾರೆ.

Actor Darshan and actress amulya
ಡಿ ಬಾಸ್ ದರ್ಶನ್​ಗೆ ಅಂಕಲ್ ಅನ್ನೋದಿಲ್ಲ ಎಂದರು ನಟಿ ಅಮೂಲ್ಯ

By

Published : Oct 31, 2020, 11:06 AM IST

Updated : Oct 31, 2020, 12:43 PM IST

ಬೆಂಗಳೂರು:ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಿನ್ನೆ ಸ್ಯಾಂಡಲ್‌ವುಡ್‌ ತಾರೆಗಳಾದ​ ದರ್ಶನ್, ಅಮೂಲ್ಯ ಹಾಗು ಚಿತ್ರನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮತಬೇಟೆ ನಡೆಸಿದರು. ಈ ಸಂದರ್ಭದಲ್ಲಿ ದರ್ಶನ್ ಹಾಗೂ ಅಮೂಲ್ಯ ನಡುವೆ ತಮಾಷೆಯ ಸನ್ನಿವೇಶವೊಂದು ನಡೆದಿದೆ.

ದರ್ಶನ್ ಅವರನ್ನು ನೋಡಿದ ಕೂಡಲೇ ಅಮೂಲ್ಯ, 'ಡಿ ಬಾಸ್ ನೀವು ನಮ್ಮ ಹೀರೋ' ಎಂದು ಹೇಳಿದ್ದಾರೆ. ಅದಕ್ಕೆ ದರ್ಶನ್ ತಕ್ಷಣ ಪ್ರತಿಕ್ರಿಯಿಸಿ, 'ಇಲ್ಲ, ನನ್ನನ್ನು 'ಅಂಕಲ್' ಅಂತಾನೆ ಕರೆಯಬಹುದು. ಚಿತ್ರ ರಂಗದಲ್ಲಿ ನನ್ನನ್ನು ಮೊದಲು ಅಂಕಲ್ ಅಂತಾ ನೀವು ಬಹಳ ಹಿಂದೆಯೇ ಕರೆದಿದ್ದೀರಾ' ಎಂದಿದ್ದಾರೆ. 'ನಾನು ಅಂಕಲ್ ಅಂತ ಹೇಳೋದಿಲ್ಲ. ನೀವು ನಮ್ಮ ಹೀರೋ' ಎಂದು ಅಮೂಲ್ಯ ಮತ್ತೆ ಹೇಳಿದ್ದಾರೆ.

ಪ್ರಚಾರದ ಬಳಿಕ ದರ್ಶನ್​​ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ ಅಮೂಲ್ಯ, 'ಹೆಸರು ಗಳಿಸಿದರೆ ನಿಮ್ಮಂತೆ ಹೆಸರು ಗಳಿಸಬೇಕು ಅನ್ನಿಸಿತು. ಇಂದು ನಿಮ್ಮೊಂದಿಗೆ ಕ್ಯಾಂಪೇನ್(ಪ್ರಚಾರ) ಮಾಡಿ, ನಿಮ್ಮ ಅಭಿಮಾನಿ ಬಳಗವನ್ನು ನೋಡಿ ಮೂಕವಿಸ್ಮಿತನಾಗಿದ್ದೇನೆ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ನನ್ನ ಮೇಲೆ ಸದಾ ಇರಲಿ' ಎಂದಿದ್ದಾರೆ.

'ನಾನು ರಾಜರಾಜೇಶ್ವರಿ ನಗರದ ನಿವಾಸಿ. ಮುನಿರತ್ನ ಅವರು ಇಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ನಾನು ಅವರ ಪರವಾಗಿ ಮಾತ್ರ ಮತ ಕೇಳಲು ಬಂದಿದ್ದೇನೆ' ಎಂದು ಅಮೂಲ್ಯ ಇದೇ ವೇಳೆ ಹೇಳಿದರು. ಕೆಲವು ತಿಂಗಳ ಹಿಂದೆ ನಟಿ ಅಮೂಲ್ಯ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಈಗ ಅವರು ಪತಿ ಜಗದೀಶ್ ಜೊತೆ ಬಿಜೆಪಿ ಸೇರಿದ್ದಾರೆ.

Last Updated : Oct 31, 2020, 12:43 PM IST

ABOUT THE AUTHOR

...view details