ನವದೆಹಲಿ: 'ದೆಹಲಿ ಕ್ರೈಮ್ಸ್' ವೆಬ್ ಸಿರಿಸ್ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ಈ ವೆಬ್ ಸಿರಿಸ್ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶೆಫಾಲಿ ಷಾಗೆ ಬೀಗ್ ಬ್ರೇಕ್ ಸಿಕ್ಕಿದೆ.
ಶೆಫಾಲಿ ಷಾ ಶಾರುಖ್ ಖಾನ್ ಅಭಿನಯದ 'ಡಾರ್ಲಿಂಗ್ಸ್' ಚಿತ್ರದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಹಾಗೇಯೆ 'ದೆಹಲಿ ಕ್ರೈಮ್ 2' ಮತ್ತು ವಿಪುಲ್ ಷಾ ಅವರ 'ಹ್ಯೂಮನ್' ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ ಅವರು, "ಸೂಪರ್ ಈ ವರ್ಷ ನಾನು ಮಾಡುತ್ತಿರುವ ಎಲ್ಲ ಕೆಲಸಗಳಿಗೆ ಉತ್ಸುಕಳಾಗಿದ್ದೇನೆ ಮತ್ತು ರೋಮಾಂಚನಗೊಂಡಿದ್ದೇನೆ. ಇದು ನಾನು ಇಷ್ಟು ದಿನ ಕಾಯುತ್ತಿದ್ದ ಕೆಲಸ. 'ಹ್ಯೂಮನ್','ಡಾರ್ಲಿಂಗ್ಸ್', 'ದೆಹಲಿ ಕ್ರೈಮ್ 2' ....ಸೇರಿ ಇನ್ನೂ ಅನೇಕ ಪಾತ್ರಗಳು ನನ್ನನ್ನು ಹುಡುಕಿಕೊಂಡು ಬರುತ್ತಿವೆ. ಇದನ್ನು ನನಗೆ ನಂಬಲಾಗುತ್ತಿಲ್ಲ. ನಾನು ಈ ಚಿತ್ರಗಳಿಗೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ. ಇದು ನನ್ನ ಪಾಲಿನ ಹಬ್ಬವಾಗಿದೆ !!! " ಎಂದಿದ್ದಾರೆ.