ಕರ್ನಾಟಕ

karnataka

ETV Bharat / sitara

ಕಿಚ್ಚನ 'ಫ್ಯಾಂಟಮ್'​ ಚಿತ್ರಕ್ಕಾಗಿ ಹೈದರಾಬಾದ್​​ನಲ್ಲಿ ಬೃಹತ್ ಸೆಟ್​​​​ ನಿರ್ಮಾಣ - Sudeep new movie updates

ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸುದೀಪ್ ಅಭಿನಯಿಸುತ್ತಿರುವ 'ಫ್ಯಾಂಟಮ್' ಚಿತ್ರಕ್ಕಾಗಿ ಹೈದರಾಬಾದ್​​ನಲ್ಲಿ ಭಾರೀ ಮೊತ್ತದ ಸೆಟ್ ನಿರ್ಮಾಣವಾಗುತ್ತಿದ್ದು ಜುಲೈ 20 ವೇಳೆಗೆ ಸುದೀಪ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

Huge set for Phantom film in Hyderabad
ಸುದೀಪ್

By

Published : Jul 9, 2020, 2:10 PM IST

ಸ್ಯಾಂಡಲ್​ವುಡ್​ ಬಾದ್​ಷಾ ಕಿಚ್ಚ ಸುದೀಪ್ ಅಭಿನಯದ 'ಫ್ಯಾಂಟಮ್'​ ಚಿತ್ರ 'ರಂಗಿತರಂಗ' ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬರಲಿದೆ. ಚಿತ್ರದಲ್ಲಿ ವಿಕ್ರಾಂತ್ ರೋಣ ಪಾತ್ರಕ್ಕೆ ಅಭಿನಯ ಚಕ್ರವರ್ತಿ ಜೀವ ತುಂಬಲಿದ್ದಾರೆ.

'ಫ್ಯಾಂಟಮ್'​ ಚಿತ್ರಕ್ಕಾಗಿ ಹೈದರಾಬಾದ್​​ನಲ್ಲಿ ಬೃಹತ್ ಸೆಟ್​​​​ ನಿರ್ಮಾಣ

ಲಾಕ್​​ಡೌನ್​ ಸಡಿಲಿಕೆ ನಂತರ ಚಿತ್ರತಂಡ ಹೈದರಾಬಾದ್​ ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ಚಿತ್ರೀಕರಣದಲ್ಲಿ ಬ್ಯುಸಿ ಆಗಿದೆ. ಜುಲೈ 6 ರಂದು ಸುದೀಪ್ 'ಫ್ಯಾಂಟಮ್' ಟೀಂ ಸೇರಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಅನೂಪ್ ಹೇಳಿದ್ದರು. ಆದರೆ ಸುದೀಪ್ ಚಿತ್ರೀಕರಣಕ್ಕೆ ಗೈರಾಗಿದ್ದಾರೆ. ಚಿತ್ರದ ಸೆಟ್ ನಿರ್ಮಾಣ ಇನ್ನೂ ಮುಗಿದಿಲ್ಲವಾದ್ದರಿಂದ ಸುದೀಪ್ ಇನ್ನೂ ಹೈದರಾಬಾದ್​​ಗೆ ಬಂದಿಲ್ಲ ಎನ್ನಲಾಗಿದೆ.

ಸುದೀಪ್

ಕಳೆದ ಕೆಲವು ದಿನಗಳಿಂದ ಹೈದರಾಬಾದ್​​​ನಲ್ಲಿ ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ 150 ಮಂದಿ ಬೃಹತ್ ಸೆಟ್ ಹಾಕುವುದರಲ್ಲಿ ನಿರತರಾಗಿದ್ಧಾರೆ. 'ಕೆಜಿಎಫ್' ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್ ನೇತೃತ್ವದಲ್ಲಿ ಈ ಸೆಟ್ ನಿರ್ಮಾಣವಾಗುತ್ತಿದೆ. ಚಿತ್ರತಂಡ 'ಫ್ಯಾಂಟಮ್' ಚಿತ್ರಕ್ಕಾಗಿ ಹೊಸ ಲೋಕವನ್ನೇ ಸೃಷ್ಟಿ ಮಾಡಲು ಹೊರಟಿದೆ.

ಹೈದಾರಾಬಾದ್​​ನಲ್ಲಿ 'ಫ್ಯಾಂಟಮ್'​ ಚಿತ್ರಕ್ಕಾಗಿ ಸೆಟ್​​​

ಶೂಟಿಂಗ್ ಸೆಟ್ ನಿರ್ಮಾಣವಾದ ನಂತರ ಜುಲೈ 20 ರ ವೇಳೆಗೆ ಸುದೀಪ್ ಚಿತ್ರದ ಶೂಟಿಂಗ್​​ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಈ ಗ್ಯಾಪ್​​ನಲ್ಲಿ ಸುದೀಪ್ ಮತ್ತೊಮ್ಮೆ ಕರ್ನಾಟಕದ ಅಭಿಮಾನಿಗಳೊಂದಿಗೆ ಲೈವ್ ವಿಡಿಯೋ ಕಾಲ್ ಮೂಲಕ ಮಾತನಾಡಲು ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಜುಲೈ 11, 12 ರಂದು ಸುದೀಪ್ ತಮ್ಮ ಅಭಿಮಾನಿಗಳೊಂದಿಗೆ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಸುದೀಪ್ ಅಭಿನಯದ 'ಫ್ಯಾಂಟಮ್ ' ಚಿತ್ರ

ABOUT THE AUTHOR

...view details