ಕರ್ನಾಟಕ

karnataka

ETV Bharat / sitara

ನಟಿ ಅಮೃತಾ ಅಯ್ಯಂಗಾರ್​ ಸ್ಯಾಂಡಲ್​​ವುಡ್​ಲ್ಲಿ ಫುಲ್​ ಬ್ಯುಸಿ - ಸಿಂಹ ಹಾಕಿದ ಹೆಜ್ಜೆ ಸಿನಿಮಾ

'ಸಿಂಹ ಹಾಕಿದ ಹೆಜ್ಜೆ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಅಮೃತಾ ಅಯ್ಯಂಗಾರ್ ಅವರಿಗೀಗ ಕೈತುಂಬಾ ಕೆಲಸ. ಒಂದರ ನಂತರ ಮತ್ತೊಂದರಂತೆ ಸಾಕಷ್ಟು ಅವಕಾಶಗಳು ಈ ನಟಿಯನ್ನು ಹುಡುಕಿಕೊಂಡು ಬರ್ತಿವೆ.

amrutha iyengar

By

Published : Aug 17, 2019, 5:04 PM IST

ಕನ್ನಡದ ನಾಯಕಿಯರ ಪೈಕಿ ಹೆಚ್ಚು ವಿದ್ಯಾವಂತ ನಟಿ ಅಮೃತಾ ಅಯ್ಯಂಗಾರ್ ಈಗ ಚಿತ್ರರಂಗದಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿದ್ದಾರೆ. ಈ ನಟಿಗೆ ಅವಕಾಶಗಳ ಹೊಳೆಯೇ ಹರಿದು ಬರುತ್ತಿದೆ.

ಮನಃಶಾಸ್ತ್ರ ವ್ಯಾಸಂಗ ಮಾಡಿ ಅಪರಾಧ ಶಾಸ್ತ್ರ ಮತ್ತು ಫೊರೆಂಸಿಕ್ ವಿಭಾಗದಲ್ಲಿ ಓದಿಕೊಂಡಿರುವ ಅಮೃತಾ, ಸಿಂಹ ಹಾಕಿದ ಹೆಜ್ಜೆ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ‘ಅನುಷ್ಕಾ’ ಸಿನಿಮಾದಿಂದ ಸಾಹಸ ಪಾತ್ರಕ್ಕೂ ಸೈ ಎನ್ನಿಸಿಕೊಂಡರು. ಸದ್ಯ ಈ ನಟಿಯ ಕೈಯಲ್ಲಿ ಐದು ಸಿನಿಮಾಗಳಿವೆ. ದುನಿಯಾ ಸೂರಿ ಹಾಗೂ ಡಾಲಿ ಧನಂಜಯ್ ಅವರ ಪಾಪ್ ಕಾರ್ನ್ ಮಂಕಿ ಟೈಗರ್, ಶಿವಾರ್ಜುನ, ಲವ್ ಮಕ್ಟೈಲ್, ನಾಕುಮುಖ ಹಾಗೂ ಓ ಸಿನಿಮಾಗಳಲ್ಲಿ ಇವರು ನಟಿಸುತ್ತಿದ್ದಾರೆ. ಅಲ್ಲದೆ ಕೆಲವು ಕತೆಗಳನ್ನು ಕೇಳಿದ್ದಾರೆ, ತಮಿಳಿನಿಂದಲೂ ಅವರಿಗೆ ಅವಕಾಶಗಳು ಬರುತ್ತಿವೆ.

ಇವರ ಐದು ಸಿನಿಮಾಗಳ ಪೈಕಿ ನಾಕುಮುಖ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಕುಶನ್ ಗೌಡ ನಿರ್ದೇಶನದ ಈ ಚಿತ್ರ ಪೊಲೀಸ್, ಪ್ರೆಸ್, ರಾಜಕೀಯ ಹಾಗೂ ಫ್ಯಾಮಿಲಿ ಸುತ್ತ ಹೆಣೆಯಲಾಗಿರುವ ಚಿತ್ರ. ಈ ಚಿತ್ರದಲ್ಲಿ ಈಕೆ ಸ್ನೇಹಿತೆಯನ್ನು ಕಳೆದುಕೊಂಡು ಪರಿತಪಿಸುವ ಪಾತ್ರ ಮಾಡಿದ್ದಾರೆ.

ABOUT THE AUTHOR

...view details