ಪೈಲ್ವಾನ್, ಕಿಚ್ಚ ಸುದೀಪ್ ಫಸ್ಟ್ ಟೈಮ್ ಬಾಡಿ ಬಿಲ್ಡ್ ಮಾಡಿ, ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸೊಕ್ಕೆ ರೆಡಿಯಾಗಿರೋ ಬಹುನಿರೀಕ್ಷಿತ ಸಿನಿಮಾ. ಬಹುಭಾಷೆಯಲ್ಲಿ ತೆರೆಗೆ ಬರುತ್ತಿರುವ ಈ ಸಿನಿಮಾಗೆ ಬಿಟೌನ್ನಿಂದ ಭಾರೀ ಬೇಡಿಕೆ ಬಂದಿದೆ.
ಬಾಲಿವುಡ್ನಲ್ಲಿ ಪೈಲ್ವಾನ್ಗೆ ಭಾರಿ ಡಿಮ್ಯಾಂಡ್...ಬಹುಕೋಟಿಗೆ ಡಬ್ಬಿಂಗ್ ರೈಟ್ಸ್ ಸೇಲ್ - undefined
ಚಿತ್ರದಲ್ಲಿ ಪೈಲ್ವಾನನ ಹುರಿಗಟ್ಟಿದ ದೇಹ, ಕೆಂಡಂತಹ ನೋಟಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ರು. ಇದೀಗ ಚಿತ್ರ ರಿಲೀಸ್ಗೆ ಕೆಲ ತಿಂಗಳಷ್ಟೇ ಬಾಕಿ ಇದ್ದು ಚಿತ್ರದ ಕ್ರೇಜ್ ಮತ್ತಷ್ಟು ಜಾಸ್ತಿ ಮಾಡಿದೆ.
![ಬಾಲಿವುಡ್ನಲ್ಲಿ ಪೈಲ್ವಾನ್ಗೆ ಭಾರಿ ಡಿಮ್ಯಾಂಡ್...ಬಹುಕೋಟಿಗೆ ಡಬ್ಬಿಂಗ್ ರೈಟ್ಸ್ ಸೇಲ್](https://etvbharatimages.akamaized.net/etvbharat/prod-images/768-512-3381806--thumbnail-3x2-pailwan.jpg)
ಅದ್ಧೂರಿ ಮೇಕಿಂಗ್, ಹೈ ಕ್ವಾಲಿಟಿಯಿಂದಲೇ ಗಮನ ಸೆಳೆಯುತ್ತಿರುವ ಚಿತ್ರಕ್ಕೆ ಇದೀಗ ಬಿಗ್ ಆಫರ್ವೊಂದು ಒಲಿದು ಬಂದಿದೆ. ಹಿಂದಿಗೆ ಈ ಚಿತ್ರದ ಡಬ್ಬಿಂಗ್ ರೈಟ್ಸ್ ಬರೋಬ್ಬರಿ 14 ಕೋಟಿ ಮೊತ್ತಕ್ಕೆ ಸೇಲ್ ಆಗಿದೆ ಅಂತಾ ಹೇಳಲಾಗ್ತಿದೆ. ಇದು ಸ್ಯಾಂಡಲ್ವುಡ್ ಮಟ್ಟಿಗೆ ದಾಖಲೆಯ ಮೊತ್ತವಾಗಿದ್ದು, ರಿಲೀಸ್ಗೂ ಮುನ್ನವೇ ಪೈಲ್ವಾನನ ಖದರ್ ತೋರಿಸುತ್ತಿದೆ.
ಪೈಲ್ವಾನ್ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಇದೇ ವರಮಹಾಲಕ್ಷ್ಮೀ ಹಬ್ಬಕ್ಕೆ ತೆರೆಕಾಣಲಿದೆ. ಚಿತ್ರದಲ್ಲಿ ನಾಯಕಿಯಾಗಿ ಆಕಾಂಕ್ಷಾ , ಕಬೀರ್ ದುಹಾನ್ ಸಿಂಗ್, ಸುನೀಲ್ ಶೆಟ್ಟಿ, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ತಾರಾಗಣವಿದೆ. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕೆ ಮತ್ತಷ್ಟು ಪವರ್ ತುಂಬಿದೆ. ಇದು ಕಿಚ್ಚ ಮತ್ತು ನಿರ್ದೇಶಕ ಕೃಷ್ಣ ಕಾಂಬಿನೇಶನ್ ಬಹು ನಿರೀಕ್ಷಿತ ಚಿತ್ರವಾಗಿದೆ. ನಿರ್ದೇಶಕ ಕೃಷ್ಣ ಪತ್ನಿ ಸ್ವಪ್ನ ಕೃಷ್ಣ ಅದ್ಧೂರಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.