ಕರ್ನಾಟಕ

karnataka

ETV Bharat / sitara

ನನ್ನ ತಪ್ಪುಗಳಿಂದ ಪಾಠ ಕಲಿತಿದ್ದೇನೆ, ದಯವಿಟ್ಟು ಒಂದು ಅವಕಾಶ ಕೊಡಿ: ಹುಚ್ಚ ವೆಂಕಟ್ - huccha venkat asks for opportunities in tv shows and movie

ನಾನು ಎಲ್ಲರನ್ನು ರಂಜಿಸಲು ಸಿದ್ದನಿದ್ದೇನೆ. ನನಗೊಂದು ಅವಕಾಶ ಕೊಡಿ. ಟಿವಿ-ಸೀರಿಯಲ್, ರಿಯಾಲಿಟಿ ಶೋ ಯಾವುದಾದರೂ ಕೆಲಸ ಕೊಟ್ಟರು ನಾನು ಮಾಡಲು ಸಿದ್ಧನಿದ್ದೇನೆ. ನನ್ನ ತಪ್ಪುಗಳನ್ನು ಕ್ಷಮಿಸಿ ನನಗೆ ಅವಕಾಶ ಕೊಡಿ ಎಂದು ಹುಚ್ಚ ವೆಂಕಟ್ ಕೇಳಿಕೊಂಡಿದ್ದಾರೆ.

huccha-venkat
huccha-venkat

By

Published : Dec 1, 2019, 3:20 AM IST

ಮೊದಲಿನಂತೆ ಚಿತ್ರರಂಗದಲ್ಲಿ ಆಕ್ಟಿವ್ ಆಗ್ಬೇಕು. ನನ್ನನ್ನು ಪ್ರೀತಿಸುವ ಜನರಿದ್ದಾರೆ ಎಂಬುದು ನನಗೆ ತಿಳಿಯಿತು. ಎಲ್ರೂ ನನ್ನ ನೋಡಿ ಭಯ ಪಡ್ತಿದ್ದಾರೆ. ಹಾಗೆ ಮಾಡಬೇಡಿ. ನನ್ನ ಜೀವನದಲ್ಲಿ ನಡೆದಿರೋ ಹಳೆ ವಿಷಯಗಳನ್ನ ತೆಗೆಯೋಕೆ ಇಷ್ಟಪಡಲ್ಲ. ನಾನು ಮಾಡಿರುವ ತಪ್ಪುಗಳನ್ನು ಕ್ಷಮಿಸಿ ನನಗೆ ಒಂದು ಅವಕಾಶ ಕೊಡಿ ಎಂದು ಹುಚ್ಚ ವೆಂಕಟ್ ಬೇಡಿಕೊಂಡರು.

ನಿಮಗೆಲ್ಲಾ ಗೊತ್ತೇ ಇದೆ. ನನಗೆ ಕೋಪ ಬಂದರೆ ನಾನೇನು ಮಾಡ್ತೇನೆಂದು ನನಗೇ ಗೊತ್ತಿಲ್ಲ. ಆದರೆ ಕೆಲ ದಿನಗಳ ಹಿಂದೆ ನಡೆದ ಘಟನೆಗಳು ನನ್ನನ್ನು ಮಾನಸಿಕವಾಗಿ ಕುಗ್ಗಿಸಿದೆ. ಮೊದಲು ನನ್ನ ನೋಡಿದಾಗ ಬಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಜನ, ಈಗ ನನ್ನ ನೋಡಿದರೆ ನಮಗೆ ಯಾಕ್ ಬೇಕಪ್ಪಾ ಇವ್ನ್ ಸಹವಾಸ ಅನ್ನೋ ರೀತಿ ವರ್ತಿಸುತ್ತಿರುವುದು ನನಗೆ ತುಂಬಾ ಬೇಸರವಾಗಿದೆ ಎಂದು ಭಾವುಕರಾದರು.

ಹುಚ್ಚ ವೆಂಕಟ್ ಸುದ್ದಿಗೋಷ್ಠಿ

ನಾನು ಸುಮ್ಮನೆ ಗಲಾಟೆ ಮಾಡಲ್ಲ. ನಾನು ಎಲ್ಲರನ್ನು ರಂಜಿಸಲು ಸಿದ್ದನಿದ್ದೇನೆ. ನನಗೊಂದು ಅವಕಾಶ ಕೊಡಿ. ಟಿವಿ-ಸೀರಿಯಲ್, ರಿಯಾಲಿಟಿ ಶೋ ಯಾವುದಾದರೂ ಕೆಲಸ ಕೊಟ್ಟರು ನಾನು ಮಾಡಲು ಸಿದ್ಧನಿದ್ದೇನೆ. ನಾನು ಬಿಗ್​ಬಾಸ್ ಹೋಗಲು ಹಂಬಲಿಸುತ್ತಿದ್ದೆನೆ. ಸುದೀಪ್ ಅವ್ರು ನನ್ನ ನೋವನ್ನ ಅರ್ಥಮಾಡಿಕೊಂಡರು. ನನ್ನ ಬಗ್ಗೆ ಬಿಗ್​ಬಾಸ್ ಅಲ್ಲಿ ಸುದೀಪ್ ಮಾತನಾಡಿದಾಗ ನನಗೆ ತುಂಬಾ ಸಂತೋಷವಾಯಿತು. ಬಿಗ್​ಬಾಸ್​ಗೆ ಮತ್ತೆ ಹೋಗುವ ಆಸೆ ಇದೆ. ಅಲ್ಲಿ ಮತ್ತೆ ಗಲಾಟೆ ಮಾಡಲ್ಲ. ಜನರನ್ನ ರಂಜಿಸುತ್ತೇನೆ. ಕನಿಷ್ಠ ಒಂದು ನಿಮಿಷ ಅವಕಾಶ ಕೊಟ್ಟರೆ ಸಾಕು. ನಾನು ಬಿಗ್​ಬಾಸ್ ವೇದಿಕೆಯನ್ನು ಹಂಚಿಕೊಳ್ಳಲು ಕಾತರದಿಂದ ಕಾಯುತ್ತಿದ್ದೇನೆ. ದಯವಿಟ್ಟು ಒಂದು ಅವಕಾಶ ಕೊಡಿ ಎಂದು ಬಿಗ್​ಬಾಸ್ ಆಯೋಜಕರಿಗೆ ಮನವಿ ಮಾಡಿದರು.

ನಾನು ನಟ, ನಿರ್ದೇಶಕ, ಗಾಯಕ ಯಾವುದೇ ಕೆಲಸ ಕೊಟ್ಟರು ಮಾಡಲು ಸಿದ್ಧವಿದ್ದು, ಬೇರೆ ಬ್ಯಾನರ್​ನಲ್ಲಿಯೂ ಸಹ ನಟಿಸುತ್ತೇನೆ. ಯಾವುದಾದ್ರು ಅವಕಾಶವಿದ್ದರೆ ನನಗೆ ತಿಳಿಸಿ. ಯಾವುದೇ ರಿಯಾಲಿಟಿ ಶೋಗಳಿಗೆ ಪಾರ್ಟಿಸಿಪೆಂಟ್ ಆಗಿ ಅಥವಾ ಜಡ್ಜ್ ಆಗಿ ಹೋಗಲು ಆಸೆ ಇದೆ ಎಂದರು.

ABOUT THE AUTHOR

...view details