ಕರ್ನಾಟಕ

karnataka

By

Published : Feb 23, 2020, 7:26 PM IST

ETV Bharat / sitara

ಏಕ್​​ ಲವ್​ ಯಾ ಚಿತ್ರದಲ್ಲಿ ರಚಿತಾ ಸಿಗರೇಟು, ಲಿಪ್​​ಕಿಸ್.. ಬುಲ್​ಬುಲ್​ ವಿರುದ್ಧ ಹುಚ್ಚ ವೆಂಕಟ್​ ಬುಸ್‌ ಬುಸ್​​!​​

ಪ್ರೇಮ್​​​ ನಿರ್ದೇಶನದ ಏಕ್​​ ಲವ್​ ಯಾ ಸಿನಿಮಾ ಟೀಸರ್​ನಲ್ಲಿ ರಚಿತಾ ರಾಮ್​​ ಲಿಪ್​ ಕಿಸ್​ ಮಾಡಿ ಸಿಗರೇಟ್​ ಸೇದಿದ್ದಾರೆ. ಇದನ್ನು ವಿರೋಧಿಸಿರುವ ಹುಚ್ಚ ವೆಂಕಟ್​​ ರಚಿತಾಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

Huccha Venkat Advising Rachitha Ram For Her Kissing
ರಚಿತಾ ಲಿಪ್​​ಕಿಸ್​​ : ಬುಲ್​ಬುಲ್​ ವಿರುದ್ಧ ಹುಚ್ಚ ವೆಂಕಟ್​ ಬುಸ್​ ಬುಸ್​​!​​

ಹುಚ್ಚ ವೆಂಕಟ್​​ ಮತ್ತೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಈ ಬಾರಿ ರಚಿತಾ ರಾಮ್​ಗೆ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪ್ರೇಮ್​ ನಿರ್ದೇಶನದ ಏಕ್​​ ಲವ್​ ಯಾ ಸಿನಿಮಾ ಟೀಸರ್​ನಲ್ಲಿ ರಚಿತಾ ರಾಮ್​​ ಲಿಪ್​ ಕಿಸ್​ ಮಾಡಿ ಸಿಗರೇಟ್​ ಸೇದಿದ್ದಾರೆ. ಇದನ್ನು ವಿರೋಧಿಸಿರುವ ಹುಚ್ಚ ವೆಂಕಟ್​​ ರಚಿತಾಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಯೂಟ್ಯೂಬ್​ನಲ್ಲಿ ವಿಡಿಯೋವೊಂದನ್ನು ಹಾಕಿರುವ ವೆಂಕಟ್​​, ಈ ವಿಡಿಯೋ ರಚಿತಾ ರಾಮ್​​ಗೆ ಎಂದು ಹೇಳುತ್ತ, ಯಾಕ್ರೀ ಈ ರೀತಿಯ ಪಾತ್ರಗಳನ್ನ ಮಾಡಿ ಜನರನ್ನ ಹಾಳ್​ ಮಾಡ್ತೀರಾ.. ನೀವು ಸಿಗರೇಟ್​ ಸೇದಿದ್ದೀರಾ.. ಲಿಪ್​ ಕಿಸ್​​ ಮಾಡಿದ್ದೀರ. ಇದ್ರಿಂದ ಏನಾಗುತ್ತೆ?. ಥಿಯೇಟರ್​ನಲ್ಲಿ ಹೆಣ್ಣು ಮಕ್ಕಳು ಕೂತು ಸಿನಿಮಾ ನೋಡೋಕೆ ಮುಜುಗರ ಆಗುತ್ತೆ ಎಂದು ಹೇಳಿದ್ದಾರೆ.

ತಮ್ಮ ಮಾತನ್ನು ಮುಂದುವರೆಸಿರುವ ಹುಚ್ಚ ವೆಂಕಟ್​​, ಎಲ್ಲವನ್ನೂ ನಿರ್ದೇಶಕರ ಮೇಲೆ ಹಾಕ್ತೀರಾ.. ನಿಮ್ಮ ಒಪ್ಪಿಗೆ ಪಡೆದೇ ನಿರ್ದೇಶಕರು ಸಿನಿಮಾ ಮಾಡೋದು.. ನಿಮ್ಮ ಟ್ಯಾಲೆಂಟ್​​ ಈ ರೀತಿ ಯಾಕ್​ ತೋರಿಸ್ತೀರ.. ಇದೆಲ್ಲ ಟ್ಯಾಲೆಂಟಾ ಎಂದು ಹಿಗ್ಗಾಮುಗ್ಗ ಕ್ಲಾಸ್​​​ ತೆಗೆದುಕೊಂಡಿದ್ದಾರೆ. ಕನ್ನಡ ಇಂಡಸ್ಟ್ರಿ ಅಂದ್ರೆ ಒಂದೂ ಅಶ್ಲೀಲ ಇಲ್ಲದಂತೆ ಇತ್ತು. ಇಂದು ಹೇಗಾಗಿದೆ ನೋಡಿ ಎಂದು ಹುಚ್ಚ ವೆಂಕಟ್‌ ವಿಡಿಯೋದಲ್ಲಿ ಕಿಡಿಕಾರಿದ್ದಾರೆ.

ABOUT THE AUTHOR

...view details