ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಾಲಿವುಡ್ ನಟ ಹೃತಿಕ್ ರೋಷನ್ ಅವರ ತಾತ ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ಜೆ.ಓಂ ಪ್ರಕಾಶ್ (93) ವಿಧಿವಶರಾಗಿದ್ದಾರೆ.
ನಟ ಹೃತಿಕ್ ರೋಷನ್ ತಾತ ಜೆ.ಓಂ ಪ್ರಕಾಶ್ ವಿಧಿವಶ - ಬಾಲಿವುಡ್ ನಟ ಹೃತಿಕ್ ರೋಷನ್
ಖ್ಯಾತ ಚಿತ್ರ ನಿರ್ದೇಶಕ ಜೆ.ಓಂ ಪ್ರಕಾಶ್ ಇಂದು ನಿಧನರಾಗಿದ್ದಾರೆ. ಬಾಲಿವುಡ್ ನಟ ಹೃತಿಕ್ ರೋಷನ್ ಅವರಿಗೆ ತಾತ ವಿಯೋಗವಾಗಿದೆ.
ಜೆ.ಓಂ ಪ್ರಕಾಶ್ ಇಂದು ಮುಂಜಾನೆ 8 ಗಂಟೆಗೆ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ನಟ ದೀಪಕ್ ಪರಾಶರ್ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಪ್ರಕಾಶ್ ಅಂತಿಮ ಸಂಸ್ಕಾರ ಇಂದು ಮಧ್ಯಾಹ್ನ ಮುಂಬೈನ ಪವನ್ ವಿಲೇ ಪಾರ್ಲೆ ಎಂಬಲ್ಲಿ ನಡೆಯಲಿದೆ.
ಪ್ರಕಾಶ್ ನಿರ್ದೇಶನದ ಆಪ್ ಕಿ ಕಸಮ್ (1974), ಆಖೀರ್ ಕ್ಯೋನ್? (1985), ಅಪ್ನಾ ಬನಾ ಲೋ (1982), ಅಪ್ನಾಪನ್ (1977), ಆಶಾ (1980), ಅರ್ಪಾನ್ (1983), ಆಡ್ಮಿ ಖಿಲೋನಾ ಹೈ (1993), ಆಯಿ ಮಿಲನ್ ಕಿ ಬೇಲಾ (1964), ಆಸ್ ಕಾ ಪಂಚಿ (1961), ಆಯೆ ದಿನ್ ಬಹರ್ ಕೆ (1966) ಸೇರಿದಂತೆ ಅನೇಕ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದವು. ಅಷ್ಟೇ ಅಲ್ಲದೆ ಬ್ಲಾಕ್ ಬಸ್ಟರ್ ಆಯೆ ಮಿಲನ್ ಕಿ ಬೆಲಾ (1964), ಆಸ್ ಕಾ ಪಂಚಿ (1961), ಆಯೆ ದಿನ್ ಬಹರ್ ಕೆ (1966) ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದರು. ಇನ್ನು ಅಜ್ಜನ ನಿಧನಕ್ಕೆ ಹೃತಿಕ್ ಸೇರಿದಂತೆ ಇಡೀ ಚಿತ್ರರಂಗ ಸಂತಾಪ ಸೂಚಿಸಿದೆ.