ಯಾವುದೇ ನಟನಿಗಾದರೂ ತಮ್ಮ ವೃತ್ತಿಜೀವನದ 25ನೇ ಸಿನಿಮಾ ಬಹಳ ಮುಖ್ಯ ಎಂದರೆ ತಪ್ಪಿಲ್ಲ. ಅದೇ ರೀತಿ, 'ನೆನಪಿರಲಿ' ಪ್ರೇಮ್ ಇದೀಗ 24 ಚಿತ್ರಗಳನ್ನು ಯಶಸ್ವಿಯಾಗಿ ಮುಗಿಸಿ, 25ನೇ ಚಿತ್ರದ ಮೂಲಕ ಎಂಟ್ರಿ ನೀಡಲು ಸಜ್ಜಾಗುತ್ತಿದ್ದಾರೆ. ಈಗಾಗಲೇ 'ಪ್ರೇಮಂ ಪೂಜ್ಯಂ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ನೋಡಿದವರೆಲ್ಲರೂ ಮೆಚ್ಚಿಕೊಂಡಿದ್ದಾರೆ. ಇನ್ನು ಚಿತ್ರ ಬಿಡುಗಡೆಯಾಗುವುದೊಂದೇ ಬಾಕಿ.
25ನೇ ಚಿತ್ರಕ್ಕಾಗಿ ಪ್ರೇಮ್ ಕೇಳಿದ ಕಥೆಗಳೆಷ್ಟು ಗೊತ್ತಾ? - Premam poojyam movie
'ಪ್ರೇಮಂ ಪೂಜ್ಯಂ' ಸಿನಿಮಾದಲ್ಲಿ ನಟಿಸುವ ಮುನ್ನ ನಟ ಪ್ರೇಮ್ ಸುಮಾರು 84 ಕಥೆಗಳನ್ನು ಕೇಳಿ ರಿಜೆಕ್ಟ್ ಮಾಡಿದ್ದರಂತೆ. ನನ್ನ 25ನೇ ಸಿನಿಮಾ ಬಹಳ ವಿಭಿನ್ನವಾಗಿರಬೇಕು ಎಂಬ ಕಾರಣದಿಂದ ಪ್ರೇಮ್ 'ಪ್ರೇಮಂ ಪೂಜ್ಯಂ' ಕಥೆಯನ್ನು ಆರಿಸಿಕೊಂಡಿದ್ದಾರೆ.
ಇದನ್ನೂ ಓದಿ:ಆ ಸಮಯದಲ್ಲಿ ನಾನು ಜೀವನದ ಮೌಲ್ಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡೆ...ಶ್ರದ್ಧಾ ಕಪೂರ್
ಈ ಚಿತ್ರವನ್ನು ಒಪ್ಪಿಕೊಳ್ಳುವುದಕ್ಕಿಂತ ಮುನ್ನ ಪ್ರೇಮ್ ಕೇಳಿದ ಕಥೆಗಳ ಸಂಖ್ಯೆ ಎಷ್ಟು ಎಂಬುದು ಆಶ್ಚರ್ಯ ತರಿಸುತ್ತದೆ. ಪ್ರೇಮ್ ಈ ಚಿತ್ರವನ್ನು ಒಪ್ಪಿಕೊಳ್ಳುವುದಕ್ಕಿಂತ ಮುನ್ನ 84 ಕಥೆಗಳನ್ನು ಕೇಳಿ ರಿಜೆಕ್ಟ್ ಮಾಡಿದ್ದರಂತೆ. 85ನೇ ಬಾರಿಗೆ ಕೇಳಿದ್ದೇ 'ಪ್ರೇಮಂ ಪೂಜ್ಯಂ' ಕಥೆ. ನಿರ್ದೇಶಕ ರಾಘವೇಂದ್ರ ನಾಲ್ಕೂವರೆ ಗಂಟೆಗಳ ಕಾಲ ಕಥೆ ಹೇಳಿದರಂತೆ. ಈ ಕಥೆ ಕೇಳುತ್ತಿದ್ದಂತೆಯೇ, ಇದು ತಮ್ಮ 25ನೇ ಚಿತ್ರಕ್ಕೆ ಪರ್ಫೆಕ್ಟ್ ಆಗಿರುತ್ತದೆ ಎಂದು ಪ್ರೇಮ್‍ಗೆ ಅನಿಸಿತಂತೆ. ತಕ್ಷಣವೇ ಅವರು ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಈ ಚಿತ್ರಕ್ಕೆ ಪ್ರೇಮ್ ನೀವೇ ಬೇಕು ಎಂದು ರಾಘವೇಂದ್ರ ಹೇಳಿದ್ದು, ಪ್ರೇಮ್ ಅವರಲ್ಲಿ ಇನ್ನಷ್ಟು ಉತ್ಸಾಹ ತುಂಬಿದೆ. ಅದೇ ಕಾರಣಕ್ಕೆ, 'ಪ್ರೇಮಂ ಪೂಜ್ಯಂ' ಚಿತ್ರವನ್ನು ತಮ್ಮ 25ನೇ ಚಿತ್ರವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಪ್ರೇಮ್.ಇದುವರೆಗೂ ಕಾರಣಾಂತರಗಳಿಂದ ಕಥೆಗೆ ಸ್ಕೋಪ್ ಇಲ್ಲದೆ ಸಿನಿಮಾಗಳಲ್ಲಿ ನಟಿಸಬೇಕಾಯ್ತು. ಆದರೆ, ಇನ್ನು ಮುಂದೆ ಒಂದಿಷ್ಟು ವಿಭಿನ್ನ ಚಿತ್ರಗಳಲ್ಲಿ ನಟಿಸಬೇಕು ಎಂಬುದು ಅವರ ಆಸೆ. ಅದರಲ್ಲೂ ತಮ್ಮೊಳಗಿನ ಕಲಾವಿದನನ್ನು ತೃಪ್ತಿಪಡಿಸಬೇಕು, ಅಭಿಮಾನಿಗಳಿಗೆ ಖುಷಿ ಪಡಿಸುವಂತಹ ಚಿತ್ರಗಳನ್ನು ಮಾಡಬೇಕು ಎಂಬುದು ಪ್ರೇಮ್ ಆಸೆಯಂತೆ. ಮುಂದಿನ ದಿನಗಳಲ್ಲಿ ಅಂತಹ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು, ನಟಿಸುವುದಾಗಿ ಪ್ರೇಮ್ ಹೇಳಿಕೊಂಡಿದ್ದಾರೆ.