ಕರ್ನಾಟಕ

karnataka

ETV Bharat / sitara

'ಜೊತೆಜೊತೆಯಲಿ' ಸಹನಟನಿಗೆ ಬಾಡಿಗೆ ಕೊಡುವಂತೆ ಮನೆ ಓನರ್​ ಕಿರುಕುಳ: ವಿಡಿಯೋ ವೈರಲ್​ - ಸಹನಟ ಪ್ರಶಾಂತ್​​​

ಜೊತೆ ಜೊತೆಯಲಿ ಧಾರಾವಾಹಿಯ ಸಹನಟ ಪ್ರಶಾಂತ್​​ಗೆ ಬಾಡಿಗೆ ನೀಡುವಂತೆ ಟಾರ್ಚರ್ ನೀಡುವುದಲ್ಲದೆ ಪ್ರಶಾಂತ್ ಮೇಲೆ ಮನೆ ಮಾಲೀಕ ಕೈ ಮಾಡಿದ್ದಾರೆ ಎಂದು ಪ್ರಶಾಂತ್ ಆರೋಪಿಸಿದ್ದಾರೆ.

House owner torcher to actor prashant
ಪ್ರಶಾಂತ್

By

Published : Jun 11, 2020, 10:55 PM IST

ಬೆಂಗಳೂರು:ಬಾಡಿಗೆ ನೀಡುವಂತೆ ಜೊತೆ ಜೊತೆಯಲಿ ಧಾರವಾಹಿ ಸಹನಟನಿಗೆ ಮನೆ ಮಾಲೀಕ ಕಿರಿಕ್ ಮಾಡಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಿರುತೆರೆ ಸಹನಟನಿಗೆ ಬಾಡಿಗೆ ನೀಡುವಂತೆ ಮನೆ ಮಾಲೀಕನಿಂದ ಟಾರ್ಚರ್

ಜೊತೆ ಜೊತೆಯಲಿ ಸೀರಿಯಲ್ ಸಹನಟ ಪ್ರಶಾಂತ್​​ಗೆ ಬಾಡಿಗೆ ನೀಡುವಂತೆ ಟಾರ್ಚರ್ ನೀಡುವುದಲ್ಲದೆ ಪ್ರಶಾಂತ್ ಮೇಲೆ ಮನೆ ಮಾಲೀಕ ಕೈ ಮಾಡಿದ್ದಾರೆ ಎಂದು ಪ್ರಶಾಂತ್ ಆರೋಪಿಸಿದ್ದಾರೆ.

ಪ್ರಶಾಂತ್

ಅಲ್ಲದೆ ಪ್ರಶಾಂತ್​ಗೆ ಮನೆ ಮಾಲೀಕ, ಅವರ ಸಹೋದರಿಯಿಂದಲೂ ಬಾಡಿಗೆ ನೀಡುವಂತೆ ಒತ್ತಡ ಹಾಕಿದ್ದಾರೆ. ಲಾಕ್ ಡೌನ್‌ ಹಿನ್ನೆಲೆ ಬಾಡಿಗೆ ಒತ್ತಡ ಹೇರಬಾರದು ಅಂತ ಸರ್ಕಾರವೇ ಹೇಳಿದೆ. ಆದರೂ ನಟನಿಗೆ ಮನೆ ಮಾಲೀಕ ಟಾರ್ಚರ್ ನೀಡಿದ್ದಾರೆ.

ಪ್ರಶಾಂತ್

ಇನ್ನು ಪ್ರಶಾಂತ್ ಮನೆಯಲ್ಲಿ ಪತ್ನಿ, ಮಗು ಇದ್ದು ಭಯದಿಂದ ಇರಬೇಕಾದ ಪರಿಸ್ಥಿತಿ ಈಗ ಸಹನಟ ಪ್ರಶಾಂತ್​​ಗೆ ಬಂದಿದೆ. ಲಾಕ್ ಡೌನ್ ಇದ್ದ ಕಾರಣ ಸಂಕಷ್ಟದಲ್ಲಿರುವ ಸಿನಿ ಕಾರ್ಮಿಕರು ಹಾಗೂ ನಟರಿಗೆ ಕೆಲಸ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಇತ್ತೀಚೆಗಷ್ಟೆ ಕಿರುತೆರೆ ಶೂಟಿಂಗ್ ಶುರುವಾಗಿದೆ. ಇನ್ನು ಮನೆ ಮಾಲೀಕ ಸಹನಟನಿಗೆ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.

ಪ್ರಶಾಂತ್

ABOUT THE AUTHOR

...view details