ಬಾಲಿವುಡ್ ಅಕ್ಷಯ್ ಕುಮಾರ್ ನಾಯಕನಾಗಿರುವ ಹೌಸ್ಫುಲ್-4 ಸಿನಿಮಾ ಪ್ರಚಾರ ಬಲು ಜೋರಾಗಿಯೇ ಸಾಗಿದೆ. ಚಿತ್ರತಂಡ ಪ್ರಚಾರಕ್ಕಾಗಿ ವಿಶೇಷ ತಂತ್ರವನ್ನು ರೂಪಿಸಿದೆ.
ಹೌಸ್ಫುಲ್-4 ಚಿತ್ರತಂಡ ತಮ್ಮ ಪ್ರಚಾರಕ್ಕಾಗಿ ರೈಲು ಬಳಸಿಕೊಂಡಿದ್ದು, ಮೊದಲು ಮುಂಬೈಯಿಂದ ದೆಹಲಿವರೆಗೆ ಪ್ರಯಾಣ ಮಾಡುವ ಮೂಲಕ ಸಿನಿಮಾ ಪ್ರಚಾರ ಮಾಡಿದೆ. ಚಿತ್ರತಂಡ ಪ್ರಯಾಣಿಸಿದ ರೈಲಿನ ಮೇಲೆ ಸಿನಿಮಾದ ಪೋಸ್ಟರ್ಗಳನ್ನು ಅಂಟಿಸಲಾಗಿತ್ತು.
ಹೀಗೆ ಪ್ರಚಾರ ಮಾಡುವುದನ್ನು ಚಿತ್ರತಂಡ 'ಪ್ರಮೋಷನ್ ಆನ್ ವೀಲ್' ಎಂದು ಕರೆದಿದೆ. ರೈಲಿನಲ್ಲಿ ಮೋಜು ಮಸ್ತಿ ಮಾಡಿಕೊಂಡು ಪ್ರಯಾಣo ಜೊತೆ ಪ್ರಚಾರ ಮಾಡಿರುವ ವಿಡಿಯೋವನ್ನು ಕಿಲಾಡಿ ಅಕ್ಷಯ್ ಕುಮಾರ್ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕಿಲಾಡಿ ಟೀಂ ಹೌಸ್ ಫುಲ್ 4 ಸಿನಿಮಾದ 'ಬಾಲ ಬಾಲ' ಹಾಡಿಗೆ ಹೆಜ್ಜೆ ಹಾಕಿದೆ.
ಭಾರತೀಯ ರೈಲ್ವೆ ಇದೀಗ ಹೊಸ ಸೌಲಭ್ಯವನ್ನು ನೀಡಿದ್ದು, ಸಿನಿಮಾ ಪ್ರಚಾರಕ್ಕಾಗಿ ರೈಲುಗಳನ್ನು ಕಾಯ್ದಿರಿಸಬಹುದು ಎಂದು ಅನುಮತಿ ನೀಡಿದೆ. ಹೌಸ್ಫುಲ್ ಸಿನಿಮಾಕ್ಕೆ ಫರಾದ್ ಸಾಮ್ಜಿ ಆ್ಯಕ್ಷನ್ ಕಟ್ ಹೇಳಿದ್ದು, ಸಾಜಿದ್ ನಡಿಯಾದ್ವಾಲಾ ಬಂಡಬಾಳ ಹಾಕಿದ್ದಾರೆ. ಇನ್ನು ಈ ಸಿನಿಮಾ ಇದೇ ತಿಂಗಳ 26ಕ್ಕೆ ತೆರೆಗೆ ಅಪ್ಪಳಿಸಲಿದೆ.