ಕರ್ನಾಟಕ

karnataka

ETV Bharat / sitara

ಸುದೀಪ್ ಅವರಿಂದ ಕನ್ನಡದ ಮತ್ತೊಂದು ಸಿನಿಮಾ ಟೀಸರ್ ಬುರ್ಜ್​ ಖಲೀಫಾ ಮೇಲೆ ಬಿಡುಗಡೆ​....? - Hostel hudugaru bekagiddare

ನಿತಿನ್ ಕೃಷ್ಣಮೂರ್ತಿ ನಿರ್ದೇಶಿಸುತ್ತಿರುವ 'HOSTEL ಹುಡುಗರು ಬೇಕಾಗಿದ್ದಾರೆ' ಸಿನಿಮಾದ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದೆ. ಫೆಬ್ರವರಿ 15 ರಂದು ಸಂಜೆ 6 ಗಂಟೆಗೆ ಬುರ್ಜ್ ಖಲೀಫಾದಲ್ಲಿ ಬಾದ್​ಷಾ ಸುದೀಪ್ ನಮ್ಮ ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದಾರೆ ಎಂದು ಬರೆಯಲಾಗಿದೆ. ಆದರೆ ಇದರ ಹಿಂದಿನ ಸತ್ಯ ಏನು ಎಂದು ತಿಳಿಯಲು ಸೋಮವಾರದವರೆಗೂ ಕಾದು ನೋಡಬೇಕು.

Hostel hudugaru
'HOSTEL ಹುಡುಗರು ಬೇಕಾಗಿದ್ದಾರೆ' ಪೋಸ್ಟರ್

By

Published : Feb 13, 2021, 2:29 PM IST

ಕಿಚ್ಚ ಸುದೀಪ್ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದೆ ಹಿನ್ನೆಲೆ ಇತ್ತೀಚೆಗೆ 'ವಿಕ್ರಾಂತ್ ರೋಣ' ಚಿತ್ರತಂಡ ಪ್ರಪಂಚದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ಮೇಲೆ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಸುದೀಪ್​​​ಗೆ ಶುಭ ಕೋರಿತ್ತು. ಅಲ್ಲಿಂದ ಬೆಂಗಳೂರಿಗೆ ವಾಪಸಾಗಿದ್ದ ಸುದೀಪ್ ಇದೀಗ ಮತ್ತೆ ಬುರ್ಜ್ ಖಲೀಫಾಗೆ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

'HOSTEL ಹುಡುಗರು ಬೇಕಾಗಿದ್ದಾರೆ' ಪೋಸ್ಟರ್

ಇದನ್ನೂ ಓದಿ:ಪ್ರೇಮಿಗಳ ದಿನದಂದು 'ಜೂನಿಯರ್​ ಚಿರು' ದರ್ಶನ

ಅಷ್ಟಕ್ಕೂ ಸುದೀಪ್ ಮತ್ತೆ ಅಲ್ಲಿಗೆ ಹೋಗುತ್ತಿರಲು ಕಾರಣ ಏನು ಎಂದು ನೀವು ಯೋಚಿಸುವುದು ಸಹಜ. ಇದಕ್ಕೆ ಕಾರಣ ಹಾಸ್ಟೆಲ್ ಹುಡುಗರಂತೆ. ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಇತ್ತೀಚೆಗೆ 'HOSTEL ಹುಡುಗರು ಬೇಕಾಗಿದ್ದಾರೆ' ಎಂಬ ಚಿತ್ರದ ಟೈಟಲ್ ರಿಲೀಸ್ ಮಾಡಿದ್ದರು. ಬಹಳ ವಿಭಿನ್ನವಾಗಿ ಚಿತ್ರದ ಟೈಟಲ್ ಬಿಡುಗಡೆ ಮಾಡಿದ್ದ ಚಿತ್ರತಂಡ ಇದೀಗ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್​ನಲ್ಲಿ ಫೆಬ್ರವರಿ 15 ರಂದು ಸಂಜೆ 6 ಗಂಟೆಗೆ ಬುರ್ಜ್ ಖಲೀಫಾದಲ್ಲಿ ಬಾದ್​ಷಾ ಸುದೀಪ್ ನಮ್ಮ ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದಾರೆ ಎಂದು ಬರೆಯಲಾಗಿದೆ. ಪೋಸ್ಟರ್​​ನಲ್ಲಿ ಬರೆಯಲಾಗಿರುವಂತೆ ನಿಜಕ್ಕೂ ಈ ಚಿತ್ರದ ಟೀಸರ್ ಬುರ್ಜ್ ಖಲೀಫಾದಲ್ಲಿ ನಡೆಯಲಿದ್ಯಾ...? ಸುದೀಪ್ ಮತ್ತೆ ದುಬೈಗೆ ಹೋಗಿ ಟೀಸರ್ ಬಿಡುಗಡೆ ಮಾಡಲಿದ್ದಾರಾ..? ಎಂಬುದನ್ನು ತಿಳಿಯಲು ಸೋಮವಾರ ಸಂಜೆ 6 ಗಂಟೆವರೆಗೂ ಕಾದು ನೋಡಬೇಕು. 'HOSTEL ಹುಡುಗರು ಬೇಕಾಗಿದ್ದಾರೆ' ಚಿತ್ರವನ್ನು ಗುಲ್​​ಮೊಹರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿತಿನ್ ಕೃಷ್ಣಮೂರ್ತಿ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ, ಟೈಟಲ್ ಮೂಲಕವೇ ಸುದ್ದಿಯಾಗುತ್ತಿರುವುದಂತೂ ನಿಜ

ABOUT THE AUTHOR

...view details