ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕರಿಯರ್‌ಗೆ ದೊಡ್ಡ ಬ್ರೇಕ್ ಅಂತ ಸಿಕ್ಕಿದ್ದೇ 'ಕಿರಿಕ್ ಪಾರ್ಟಿ' ಸಿನಿಮಾದಿಂದ. ಆ ಸಿನಿಮಾದಲ್ಲಿ ಮೊದಲು ಕರ್ಣನ ಪಾತ್ರದಲ್ಲಿ ಕ್ಯೂಟ್ ಆಗಿರೋ ಕಾಲೇಜ್ ಹುಡುಗನಾಗಿ ಕಾಣಿಸಿಕೊಳ್ಳುವ ರಕ್ಷಿತ್, ನಂತರ ರಗಡ್ ಆಗಿ ಅಭಿನಯಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಸದ್ಯ, ಚಾರ್ಲಿ 777, ಸಪ್ತಸಾಗರದಾಚೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿ, ಮತ್ತೆ ಕಾಲೇಜು ಹುಡುಗನಾಗಿದ್ದಾರೆ.
ಹಾಗಾದರೆ, ರಕ್ಷಿತ್ ಶೆಟ್ಟಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ. ಚಿತ್ರದಲ್ಲಿ ಅಭಿನಯಯಿಸುತ್ತಿದ್ದಾರಾ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಸದ್ಯ, ರಕ್ಷಿತ್ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ನಟಿಸುತ್ತಿಲ್ಲ. ಬದಲಾಗಿ ಆ ಚಿತ್ರದ ಪ್ರಮೋಷನಲ್ ವಿಡಿಯೋದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಹೌದು..ತುಂಟಾಟಿಕೆ, ಹುಡುಗಾಟದ ಬುದ್ಧಿ ಹಾಗೂ ಕಾಲೇಜಿನ ಪುಡಿರೌಡಿಗಳ ಸಹವಾಸವನ್ನು ಬಿಟ್ಟಿರುವ ಕರ್ಣ, ಈಗ ಸಂಪೂರ್ಣವಾಗಿ ಬದಲಾಗಿದ್ದಾರೆ. ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಯೋಗಾಭ್ಯಾಸ ಮಾಡುತ್ತಾರೆ. ಬಳಿಕ ಬೆಚ್ಚನೆ ಕಾಫಿ ಹೀರುತ್ತಾ, ಸೂರ್ಯೋದಯವನ್ನು ಆನಂದಿಸುತ್ತಾರೆ. ಜೊತೆಗೆ ಪಕ್ಷಿ ವೀಕ್ಷಣೆ ಕೂಡ ಇವರ ಹೊಸ ಹವ್ಯಾಸ. ಇದೆಲ್ಲ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕಾಗಿ ಮಾಡಿರುವ ಹೊಸ ಪ್ರಮೋಷನಲ್ ವಿಡಿಯೋದಲ್ಲಿ ರಕ್ಷಿತ್ ಕಾಣಿಸಿಕೊಂಡಿರುವ ಪರಿ ಇದು.