ಕರ್ನಾಟಕ

karnataka

ETV Bharat / sitara

150 ಎಕರೆ ಜಮೀನಿನಲ್ಲಿ ಚಿತ್ರನಗರಿ ಆಗುವ ಭರವಸೆ ಇದೆ: ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್

ಚಿತ್ರ ನಗರಿಗೆ, ಹೆಸರಘಟ್ಟದಲ್ಲಿ 150 ಎಕರೆ ಜಮೀನು ಫೈನಲ್ ಆಗಿದೆ. ಇದರ ಜೊತೆಗೆ ಈ ಜಾಗದಲ್ಲಿ ಯಾವುದೇ ತಕರಾರು ಇಲ್ಲ. ಬರುವ ಬಜೆಟ್​ನಲ್ಲಿ ಈ ಜಾಗದಲ್ಲಿ 500 ಕೋಟಿ ರೂ. ಅನುದಾನದಲ್ಲಿ ಶಂಕು ಸ್ಥಾಪನೆ ಆಗಲಿದೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್ ವಿಶ್ವಾಸ ವ್ಯಕ್ತಪಡಿಸಿದರು.

By

Published : Mar 6, 2021, 9:35 PM IST

ಅಧ್ಯಕ್ಷ ಜಯರಾಜ್
ಅಧ್ಯಕ್ಷ ಜಯರಾಜ್

ಬೆಂಗಳೂರು: ಹೈದರಾಬಾದಿನ ರಾಮೋಜಿ‌ ಫಿಲ್ಮ್‌ ಸಿಟಿಯಂತೆ, ರಾಜ್ಯಕ್ಕೆ ಬೃಹತ್‌ ಗಾತ್ರದ ಚಿತ್ರನಗರಿ ಅಗತ್ಯವಿದೆ. ಆದರೆ ಯಾವುದೇ ಸರ್ಕಾರ ಬಂದರೂ ಕೋಟಿಗಟ್ಟಲೆ ಅನುದಾನದ ಪ್ರಕಟಣೆ ಮಾಡುತ್ತಿದೆಯಾದರೂ ಇಲ್ಲಿವರೆಗೂ ಚಿತ್ರ ನಗರಿಗೆ ಮಾತ್ರ ಚಾಲನೆ ನೀಡಿಲ್ಲ.

ಈ ಬಗ್ಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್ ಮಾತನಾಡಿ, ಈಗಾಗಲೇ ಚಿತ್ರ ನಗರಿಗೆ, ಹೆಸರಘಟ್ಟದಲ್ಲಿ 150 ಎಕರೆ ಜಮೀನು ಫೈನಲ್ ಆಗಿದೆ. ಇದರ ಜೊತೆಗೆ ಈ ಜಾಗದಲ್ಲಿ ಯಾವುದೇ ತಕರಾರು ಇಲ್ಲ. ಬರುವ ಬಜೆಟ್​ನಲ್ಲಿ ಈ ಜಾಗದಲ್ಲಿ 500 ಕೋಟಿ ರೂ. ಅನುದಾನದಲ್ಲಿ ಶಂಕು ಸ್ಥಾಪನೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಏಕ ಪರದೆಯ ಚಿತ್ರಮಂದಿರಗಳಲ್ಲಿ ಪರವಾನಗಿ ಪಡೆದ ಒಂದು ಲಕ್ಷ ರೂ. ಶುಲ್ಕವನ್ನು ಇನ್ನೂ ಒಂದು ವರ್ಷಕ್ಕೆ ಹಾಗೇ ಮುಂದುವರೆಸಬೇಕು ಎಂದು ಬಜೆಟ್ ಪೂರ್ವಭಾವಿ ಸಭೆಯಲ್ಲಿ ಕೇಳಿಕೊಳ್ಳಲಾಗಿದೆ‌. ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಚಿತ್ರರಂಗದ ಪ್ರತಿಯೊಬ್ಬರಿಗೆ ಸಹಾಯವಾಗಲಿ ಎಂದು ಸರ್ಕಾರ ಈಗ 15 ಕೋಟಿ ರೂ. ಹಣ ಬ್ಯಾಂಕಿನಲ್ಲಿ ಇಟ್ಟಿದ್ದು, ಹಣದ ಬಡ್ಡಿಯಿಂದ ಬರುವ ಮೊತ್ತವನ್ನು ಕಷ್ಟದಲ್ಲಿರುವ ಸಿನಿಮಾ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಹಾಗೂ ಕಾರ್ಮಿಕರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದರು.

ABOUT THE AUTHOR

...view details