ಕರ್ನಾಟಕ

karnataka

ETV Bharat / sitara

ಸಿಕ್ಸರ್ ಬಾರಿಸಿದ ಹೊಂಬಾಳೆ ಫಿಲ್ಮ್ಸ್.. ಸಂಭ್ರಮಾಚರಣೆಯಲ್ಲಿ ಅಪ್ಪು, ಯಶ್! - ಹೊಂಬಾಳೆ ಫಿಲ್ಮ್ಸ್ ಲೆಟೆಸ್ಟ್ ನ್ಯೂಸ್

ಸೂಪರ್ ಹಿಟ್ ಚಿತ್ರಗಳ ನಿರ್ಮಾಣ ಮಾಡಿದ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ 6 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ.

Hombale films is celebrating the success
ಸಿಕ್ಸರ್ ಬಾರಿಸಿದ ಹೊಂಬಾಳೆ ಫಿಲ್ಮ್ಸ್.. ಸಂಭ್ರಮಾಚರಣೆಯಲ್ಲಿ ಅಪ್ಪು ಯಶ್!

By

Published : Dec 22, 2019, 11:27 PM IST

ಬೆಂಗಳೂರು: ಕನ್ನಡದಲ್ಲಿ ರಾಜಕುಮಾರ ಕೆಜಿಎಫ್ ನಂತಹ ಸೂಪರ್ ಹಿಟ್ ಚಿತ್ರಗಳ ನಿರ್ಮಾಣ ಮಾಡಿದ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಯಶಸ್ವಿ 6 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ.

ಸಿಕ್ಸರ್ ಬಾರಿಸಿದ ಹೊಂಬಾಳೆ ಫಿಲ್ಮ್ಸ್.. ಸಂಭ್ರಮಾಚರಣೆಯಲ್ಲಿ ಅಪ್ಪು ಯಶ್!

ಈ ಸಂಭ್ರಮವನ್ನು ನಿರ್ಮಾಪಕ ವಿಜಯ್ ಕಿರಗಂದೂರ್ ಗ್ಯ್ರಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಖಾಸಗಿ ರೆಸಾರ್ಟ್​ನಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ಈ ಸಂಭ್ರಮಾಚರಣೆ ಕಾರ್ಯಕ್ರಮ‌ ಅಯೋಜಿಸಿದ್ದು, ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹಾಗೂ ಯಶ್, ರಾಧಿಕಾ ಪಂಡಿತ್ ಭಾಗಿಯಾಗಿದ್ದಾರೆ.

ಇನ್ನು ಈ ಕಾರ್ಯಕ್ರಮದಲ್ಲಿ ಯುವ ರತ್ನ ಚಿತ್ರದ ಪೋಸ್ಟರ್ ಡಿಸೈನ್ ಇರುವ ಕೇಕ್ ಕಟ್ ಮಾಡಿ ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. 6 ವರ್ಷದಲ್ಲಿ 6 ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್, ಪುನೀತ್ ರಾಜ್​ಕುಮಾರ್ ನಟನೆಯ 'ನಿನ್ನಿಂದಲೆ' ಸಿನಿಮಾ ನಿರ್ಮಾಣ ಮಾಡುವ ಮೂಲಕ ಸ್ಯಾಂಡಲ್ ವುಡ್​ಗೆ ನಿರ್ಮಾಪಕನಾಗಿ ವಿಜಯ್ ಕಿರಗಂದೂರ್ ಪಾದಾರ್ಪಣೆ ಮಾಡಿದರು. ನಂತರ, ರಾಜಕುಮಾರ, ಕೆಜಿಎಫ್, ಯುವ ರತ್ನ, ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ, ಕೆಜಿಎಫ್ 2 ಚಿತ್ರವನ್ನು ನಿರ್ಮಾಣ ಮಾಡಿ ಸದ್ಯ ಸ್ಯಾಂಡಲ್ ವುಡ್​ನ ಸಕ್ಸಸ್ ಫುಲ್ ಬ್ಯಾನರ್ ಎಂಬ ಹೆಗ್ಗಳಿಕೆ ಗಳಿಸಿದೆ.

ABOUT THE AUTHOR

...view details