ಬ್ರಿಟಿಷ್ ನಟ ಬೆನ್ 50 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಇವರು ಮೋಹನ್ ದಾಸ್ ಗಾಂಧಿ ಪಾತ್ರದಲ್ಲಿ ನಟಿಸಿದ್ದ ಹಾಲಿವುಡ್ನ 'ಗಾಂಧಿ' (1982) ಸಿನಿಮಾ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿತು. ಗ್ರ್ಯಾಮಿ, BAFTA, ಎರಡು ಬಾರಿ ಗೋಲ್ಡನ್ ಗ್ಲೋಬ್ಸ್ ಮತ್ತು ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ ಪುರಸ್ಕೃತ ಈ ಮೇರು ನಟರನ್ನು ಈಗ ಚಂದನವನಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ.
ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಸಿನಿಮಾಗಳನ್ನು ನೀಡಿ ಎಂಟು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಪಿ.ಶೇಷಾದ್ರಿ ಸದ್ಯ 'ಮೋಹನದಾಸ' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಮಹಾತ್ಮ ಗಾಂಧಿಯವರ ಬಾಲ್ಯ ಆಧರಿಸಿದ ಈ ಸಿನಿಮಾ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕ ಬೊಳುವಾರು ಮಹಮದ್ಕುಂಞ್ಅವರ "ಪಾಪು ಗಾಂಧಿ, ಬಾಪು ಗಾಂಧಿ ಆದ ಕಥೆ" ಮತ್ತು ಮಹಾತ್ಮ ಗಾಂಧಿಯವರ ಆತ್ಮಚರಿತ್ರೆ ಸತ್ಯದೊಂದಿಗೆ ನನ್ನ ಪ್ರಯೋಗಗಳು ಕೃತಿಗಳನ್ನು ಆಧರಿಸಿದ ಸಿನಿಮಾ.