ಕರ್ನಾಟಕ

karnataka

ETV Bharat / sitara

ಧಾರಾವಾಹಿ ಆರಂಭಕ್ಕೆ ವಿಘ್ನ : ಮತ್ತೆ ಮುಂದಕ್ಕೆ ಹೋದ 'ಹಿಟ್ಲರ್ ಕಲ್ಯಾಣ' - actor dileep raj movies

ಜುಲೈ 19ರಂದು ಆರಂಭವಾಗಲಿರುವ ಪ್ರೋಮೋ‌ ಕೂಡ ಬಿಡುಗಡೆಯಾಗಿತ್ತು. ಈ ಧಾರಾವಾಹಿಯಲ್ಲಿ ನಟ ದಿಲೀಪ್ ರಾಜ್ ನಾಯಕನಾಗಿದ್ದು, ಈ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿ ಸಹ ಹೊತ್ತಿದ್ದಾರೆ. ಆದರೆ, ಧಾರಾವಾಹಿ ಆರಂಭಕ್ಕೂ ಮುನ್ನವೇ ಚಿತ್ರೀಕರಣ ವೇಳೆ ಅಪಘಾತ ನಡೆದಿರುವುದು ತಂಡಕ್ಕೆ ಆಘಾತ ತಂದಿದೆ..

hitler
ದಿಲೀಪ್​ ರಾಜ್​

By

Published : Jul 12, 2021, 7:32 PM IST

ಹೊಸ ಧಾರಾವಾಹಿಯೊಂದರ ಆರಂಭಕ್ಕೆ ಹಿನ್ನಡೆಯಾಗಿದೆ. ಕಳೆದ ನಾಲ್ಕು ತಿಂಗಳಿಂದ ಆರಂಭಕ್ಕೆ ತುದಿಗಾಲಲ್ಲಿ‌ ನಿಂತಿದ್ದ ಧಾರಾವಾಹಿ, ಇದೇ 19ರಂದು ಶುರುವಾಗಬೇಕಿತ್ತು. ಆದರೆ, ಸದ್ದಿಲ್ಲದೇ ಸದ್ಯಕ್ಕೆ ಸ್ಥಗಿತವಾಗಿದೆ.

ನಟ ದಿಲೀಪ್​ ರಾಜ್​

ಜೀ ಕನ್ನಡದಲ್ಲಿ ದಿಲೀಪ್ ರಾಜ್ ನಟನೆಯ ಹೊಸ ಧಾರಾವಾಹಿ'ಹಿಟ್ಲರ್ ಕಲ್ಯಾಣ' ಆರಂಭವಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಶುರುವಾಗುತ್ತಿಲ್ಲ. ಮೂಲಗಳ ಪ್ರಕಾರ, ಧಾರಾವಾಹಿಯ ನಾಯಕಿಗೆ ಅಪಘಾತವಾಗಿದ್ದು, ದೃಶ್ಯವೊಂದರ ಚಿತ್ರೀಕರಣ ವೇಳೆ ಸ್ಕೂಟಿಯಿಂದ ಬಿದ್ದು ತಲೆಗೆ ಏಟು ಮಾಡಿಕೊಂಡಿದ್ದಾರೆ. ಹೀಗಾಗಿ, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಈ ಬಗ್ಗೆ ಧಾರಾವಾಹಿ ತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಜುಲೈ 19ರಂದು ಆರಂಭವಾಗಲಿರುವ ಪ್ರೋಮೋ‌ ಕೂಡ ಬಿಡುಗಡೆಯಾಗಿತ್ತು. ಈ ಧಾರಾವಾಹಿಯಲ್ಲಿ ನಟ ದಿಲೀಪ್ ರಾಜ್ ನಾಯಕನಾಗಿದ್ದು, ಈ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿ ಸಹ ಹೊತ್ತಿದ್ದಾರೆ. ಆದರೆ, ಧಾರಾವಾಹಿ ಆರಂಭಕ್ಕೂ ಮುನ್ನವೇ ಚಿತ್ರೀಕರಣ ವೇಳೆ ಅಪಘಾತ ನಡೆದಿರುವುದು ತಂಡಕ್ಕೆ ಆಘಾತ ತಂದಿದೆ.

ABOUT THE AUTHOR

...view details