ಕರ್ನಾಟಕ

karnataka

ETV Bharat / sitara

ಸ್ಯಾಂಡಲ್​​ವುಡ್​ನ​​​ ಮತ್ತೊಂದು ಜೋಡಿ ಹಸೆಮಣೆಗೆ : ಹಿತಾ ಜೊತೆ 'ಹಾಗೇ ಸುಮ್ಮನೆ‌‌ ಕಿರಣ್' - ಸಿಹಿಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಖರ್ ಮದುವೆ ನ್ಯೂಸ್​

ಸಿಹಿಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಖರ್ ಮತ್ತು ಹಾಗೆ ಸುಮ್ಮನೆ ಖ್ಯಾತಿಯ ಕಿರಣ್ ಶ್ರೀನಿವಾಸ್ ಸಪ್ತಪದಿ ತುಳಿಯಲಿದ್ದಾರೆ.‌ ಸುಮಾರು ವರ್ಷಗಳಿಂದ ಕಿರಣ್ ಹಾಗೂ ಹಿತಾ ಪರಸ್ಪರ ಪ್ರೀತಿಸುತ್ತಿದ್ರು‌‌.

Hitha weds with  Kirana
ಸಿಹಿಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಖರ್ ಮದುವೆ

By

Published : Nov 30, 2019, 8:18 PM IST

ಕನ್ನಡ ಚಿತ್ರರಂಗದಲ್ಲಿ ಮದುವೆ ಪರ್ವ ಶುರುವಾಗಿದೆ. ಇತ್ತೀಚೆಗಷ್ಟೇ ಆಕ್ಷನ್ ಪ್ರಿನ್ಸ್​​ ಧ್ರುವ ಸರ್ಜಾ ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಇದ್ರ ಜೊತೆಗೆ ಕವಲುದಾರಿ ಹೀರೋ ರಿಷಿ ಮದುವೆಯಾದ್ರೆ, ಕನ್ನಡ ರಾಪರ್ ಚಂದನ್ ಶೆಟ್ಟಿ ಬಿಗ್ ಬಾಸ್ ಗೊಂಬೆ ನಿವೇದಿತಾ ಗೌಡ ಜೊತೆ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ.

ಸಿಹಿಕಹಿ ಚಂದ್ರು ದಂಪತಿ ಜೊತೆ ಪುತ್ರಿ ಹಿತಾ ಚಂದ್ರಶೇಖರ್

ಈಗ ಹಿರಿಯ ನಟ, ಸಿಹಿಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಖರ್ ಮತ್ತು ಹಾಗೆ ಸುಮ್ಮನೆ ಖ್ಯಾತಿಯ ಕಿರಣ್ ಶ್ರೀನಿವಾಸ್ ಸಪ್ತಪದಿ ತುಳಿಯಲಿದ್ದಾರೆ.‌ ಸುಮಾರು ವರ್ಷಗಳಿಂದ ಕಿರಣ್ ಹಾಗೂ ಹಿತಾ ಪರಸ್ಪರ ಪ್ರೀತಿಸುತ್ತಿದ್ರು‌‌. 'ಒಂಥರಾ ಬಣ್ಣಗಳು' ಚಿತ್ರದಲ್ಲಿ ಕಿರಣ್ ಹಾಗೂ ಹಿತಾ ಒಟ್ಟಿಗೆ ನಟಿಸಿದ್ದು, ನಂತರ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ, ಮೇ ತಿಂಗಳಲ್ಲಿ ಈ ಜೋಡಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ರು.

ಈಗ ಹಿತಾ ಚಂದ್ರಶೇಖರ್ ಹಾಗೂ ಕಿರಣ್ ಶ್ರೀನಿವಾಸ್ ಎರಡು ಕುಟುಂಬಗಳ ಸಮ್ಮುಖದಲ್ಲಿ ನಾಳೆ ಹಸೆಮಣೆ ಏರಲಿದ್ದಾರೆ. ಈಗಾಗಲೇ ಸಿಹಿ ಕಹಿ ಚಂದ್ರಶೇಖರ್ ಮನೆಯಲ್ಲಿ ಮದುವೆ ಶಾಸ್ತ್ರ ಹಾಗೂ ಮೆಹಂದಿ ಕಾರ್ಯಕ್ರಮ ಶುರುವಾಗಿದ್ದು, ಈ ಫೋಟೋವನ್ನ ಹಿತಾ ಚಂದ್ರಶೇಖರ್ ಇನ್ಸ್​​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಮದುವೆ ಸಂಭ್ರಮದಲ್ಲಿ ಸಿಹಿಕಹಿ ಚಂದ್ರು ಕುಟುಂಬ
ಸಿಹಿಕಹಿ ಚಂದ್ರು ಪುತ್ರಿ ಹಿತಾ

For All Latest Updates

TAGGED:

ABOUT THE AUTHOR

...view details