ಕಾಲ್ ಕೆಜಿ ಪ್ರೀತಿ, ದುನಿಯಾ 2 ಹಾಗು ಪ್ರಿಮಿಯರ್ ಪದ್ಮಿನಿ ಸಿನಿಮಾ ಮೂಲಕ ಸಿನಿ ಪ್ರಿಯರ ಹೃದಯ ಕದ್ದ ನಟಿ ಹಿತಾ ಚಂದ್ರಶೇಖರ್. ನಟ, ನಿರ್ದೇಶಕ ಸಿಹಿಕಹಿ ಚಂದ್ರು ಮುದ್ದಿನ ಮಗಳು. ಹಿತಾ ಕಳೆದ ವರ್ಷ ನಟ ಕಿರಣ್ ಜೊತೆ ಸಪ್ತಪದಿ ತುಳಿದಿದ್ರು. ಮದುವೆ ಆದ ಮೇಲೆ ಮುಂಬೈಗ ಶಿಫ್ಟ್ ಆಗಿರುವ ಇವರು ಕ್ರಿಕೆಟ್ ದೇವರನ್ನ ಭೇಟಿ ಮಾಡುವ ಮೂಲಕ ಥ್ರಿಲ್ ಆಗಿದ್ದಾರೆ.
ಕ್ರಿಕೆಟ್ ದೇವರ ಜೊತೆ ಸಿಹಿ ಕಹಿ ಚಂದ್ರು ಮಗಳ 'ಹಿತಾ'ವಾದ ಫೋಟೋ! - ಹಿತಾ ಚಂದ್ರಶೇಖರ್
ಜಾಹೀರಾತು ಒಂದರಲ್ಲಿ ಸಚಿನ್ ತೆಂಡೂಲ್ಕರ್ ಜೊತೆ ಹಿತಾ ಚಂದ್ರಶೇಖರ್ ಕಾಣಿಸಿಕೊಳ್ಳುವ ಮೂಲಕ ಬಹು ದಿನದ ಕನಸನ್ನು ನನಸು ಮಾಡಿಕೊಂಡಿದ್ದಾರೆ
ಕ್ರಿಕೆಟ್ ದೇವರ ಜೊತೆ ಸಿಹಿ ಕಹಿ ಚಂದ್ರು ಮಗಳ 'ಹಿತಾ'ವಾದ ಫೋಟೋ!
ಹೌದು ಜಾಹೀರಾತು ಒಂದರಲ್ಲಿ ಸಚಿನ್ ತೆಂಡೂಲ್ಕರ್ ಜೊತೆ ಹಿತಾ ಚಂದ್ರಶೇಖರ್ ಕಾಣಿಸಿಕೊಳ್ಳುವ ಮೂಲಕ ಬಹು ದಿನದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಫ್ಯಾನ್ ಕಂಪನಿವೊಂದರ ಜಾಹೀರಾತು ಇದಂತೆ. ಇನ್ನು ಸಚಿನ್ ತೆಂಡೂಲ್ಕರ್ ಕಾಣುವ ತವಕದಲ್ಲಿ ಒಂದು ವಾರದಿಂದ ಕಾಯುತ್ತಿದ್ದರಂತೆ. ಅದರಂತೆ ಹಿತಾ ಚಂದ್ರಶೇಖರ್ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಿ ಒಂದು ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.
ಈ ಬಗ್ಗೆ ಹೇಳಿರುವ ಹಿತಾ, ಇದು ನನ್ನ ಜೀವನದ ಮೋಸ್ಟ್ ಮೆಮೋರೆಬಲ್ ಮೂಮೆಂಟ್ ಅಂತಾ ಬಣ್ಣಿಸಿಕೊಂಡಿದ್ದಾರೆ.