ಕರ್ನಾಟಕ

karnataka

ETV Bharat / sitara

ಬಾತ್​ ಟಬ್​ನಲ್ಲಿ ಕುಳಿತು ಹಾಟ್ ಪೋಸ್​ ಕೊಟ್ಟ ಗ್ಲಾಮರ್ ಚೆಲುವೆ ಹೀನಾ ಖಾನ್ - ಬಾತ್​ ಟಬ್​ನಲ್ಲಿ ಕುಳಿತು ಹಾಟ್ ಪೋಸ್​ ಕೊಟ್ಟ ಹೀನಾ ಖಾನ್

ಗ್ಲಾಮರ್ ಚೆಲುವೆ ಹೀನಾ ಖಾನ್ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಹಾಟ್ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

Hina Khan
ಗ್ಲಾಮರ್ ಚೆಲುವೆ ಹೀನಾ ಖಾನ್ ಫೋಟೋಶೂಟ್​

By

Published : Nov 20, 2021, 9:43 AM IST

ಕಿರುತೆರೆ ನಟಿ ಹೀನಾ ಖಾನ್ (Hina Khan) ತಮ್ಮ ಅದ್ಭುತವಾದ ಹಾಟ್ ಮತ್ತು ಮಾದಕ ಫೋಟೋ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುವ ಮೂಲಕ ಆಗಾಗ ಅಭಿಮಾನಿಗಳ ಹೃದಯಕ್ಕೆ ಕಿಚ್ಚು ಹಚ್ಚುತ್ತಿರುತ್ತಾರೆ.

ಸದ್ಯಕ್ಕೆ ಗ್ಲಾಮರ್ ಚೆಲುವೆ ಹೀನಾ ಖಾನ್ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಬಿಳಿ ಮತ್ತು ಕೆಂಪು ಬಣ್ಣದ ಉಡುಪು ಧರಿಸಿ, ನಟಿ ಬಾತ್​ ಟಬ್​ನಲ್ಲಿ ಕುಳಿತು ವಿಭಿನ್ನ ಶೈಲಿಯಲ್ಲಿ ಪೋಸ್​ ಕೊಟ್ಟಿದ್ದಾರೆ. ಈ ಪೋಟೋಗಳಿಗೆ 3,37,898 ಲೈಕ್ಸ್​ ಬಂದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಗ್ಲಾಮರ್ ಚೆಲುವೆ ಹೀನಾ ಖಾನ್ ಫೋಟೋಶೂಟ್​

ಈಗಾಗಲೇ 15.4 ಮಿಲಿಯನ್‌ಗಿಂತ ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವ ಹೀನಾ ಅವರ ಈ ಫೋಟೋಗಳು ಈಗ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ನಟಿ ಹೀನಾ ಖಾನ್ 2009 ರಿಂದ ಕಿರುತೆರೆ, ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಸಕ್ರಿಯರಾಗಿ ಭಾಗಿಯಾಗಿದ್ದಾರೆ. ಕಳೆದ ಒಂದು ದಶಕದಿಂದ ಹೀನಾ ಗ್ಲಾಮರ್ ಚೆಲುವೆ ಎಂದು ಗುರುತಿಸಿಕೊಂಡಿದ್ದು, ಒಂದಾದ ಮೇಲೆ ಒಂದು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ.

ABOUT THE AUTHOR

...view details