ಹೈದರಾಬಾದ್:ವಿವಾಹ ವಿಚ್ಚೇದನದ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಟಾಲಿವುಡ್ ನಟಿ ಸಮಂತಾ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಒಳಗಾಗಿದ್ದಾರೆ.
ಸಿನಿಮಾವೊಂದರ ಚಿತ್ರೀಕರಣಕ್ಕೆಂದು ನಟಿ ಸಮಂತಾ ಇತ್ತೀಚೆಗೆ ಕಡಪಾಗೆ ತೆರಳಿದ್ದರು. ಸೋಮವಾರ ವಾಪಸ್ ಆದ ಬಳಿಕ ನಟಿಗೆ ಸುಸ್ತು ಜೊತೆಗೆ ಶೀತ ಜ್ವರ ಕಾಣಿಸಿಕೊಂಡಿದೆ. ಇದರಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.