ಬೆಂಗಳೂರು:ದೊಡ್ಡಮನೆ ಕುಟುಂಬದಿಂದ ಮೂರನೇ ತಲೆಮಾರಿನ ಕಾಲವಿದೆಯಾಗಿ ಡಾ.ರಾಜಕುಮಾರ್ ಮಗಳು ಪೂರ್ಣಿಮಾ-ನಟ ರಾಂಕುಮಾರ್ ಅವರ ಪುತ್ರಿ ಧನ್ಯಾ ರಾಮಕುಮಾರ್ ಬೆಳ್ಳಿ ತೆರೆಗೆ ಹೆಜ್ಜೆ ಇಟ್ಟಿದ್ದಾರೆ.
ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟ ಅಣ್ಣಾವ್ರ ಮೊಮ್ಮಗಳು.. ಧನ್ಯಾ ರಾಂಕುಮಾರ್ ಚೊಚ್ಚಲ ಸಿನಿಮಾ ಇದು - undefined
ದೊಡ್ಡಮನೆ ಕುಟುಂಬದಿಂದ ಮೂರನೇ ತಲೆಮಾರಿನ ಕಾಲವಿದೆಯಾಗಿ ಡಾ.ರಾಜಕುಮಾರ್ ಅವರ ಮೊಮ್ಮಗಳು ಧನ್ಯಾ ರಾಂಕುಮಾರ್ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ.
![ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟ ಅಣ್ಣಾವ್ರ ಮೊಮ್ಮಗಳು.. ಧನ್ಯಾ ರಾಂಕುಮಾರ್ ಚೊಚ್ಚಲ ಸಿನಿಮಾ ಇದು](https://etvbharatimages.akamaized.net/etvbharat/prod-images/768-512-3892423-thumbnail-3x2-sow.jpg)
ಇದೇ ಮನೆಯಿಂದ ಧೀರನ್ ರಾಂಕುಮಾರ್ ಸಹ ‘ದಾರಿ ತಪ್ಪಿದ ಮಗ’ ಸಿನಿಮಾದಿಂದ ಚಿತ್ರದೊಂದಿಗೆ ಸಿನಿರಂಗದಲ್ಲಿ ದಾರಿ ಹುಡುಕಲು ಹೊರಟಿದ್ದು, ಈಗ ಧೀರನ್ ಸಹೋದರಿಯ ಸರದಿ. ಧನ್ಯಾ ರಾಂಕುಮಾರ್ ಚಿತ್ರಕ್ಕೆ ‘ನಿನ್ನ ಸನಿಹಕೆ’ ಎಂಬ ಶೀರ್ಷಿಕೆಯನ್ನ ನಿರ್ದೇಶಕ ಸುಮನ್ ಜಾದುಗಾರ್ ಇಟ್ಟಿದ್ದಾರೆ. ಆಗಸ್ಟ್ ನಲ್ಲಿ ಈ ಚಿತ್ರ ಸೆಟ್ಟೇರಲಿದೆ. ಮದುವೆಯ ಮಮತೆಯ ಕರೆಯೋಲೆ ಚಿತ್ರದ ನಾಯಕ ಸೂರಜ್ ಗೌಡ ಜೊತೆ ಅಣ್ಣಾವ್ರ ಮೊಮ್ಮಗಳು ಬಣ್ಣ ಹಚ್ಚಲಿದ್ದಾರೆ.
ಸದ್ಯ, ‘ಸಿಲಿಕಾನ್ ಸಿಟಿ’ ಸಿನಿಮಾದಲ್ಲಿ ಸೂರಜ್ ಬ್ಯುಸಿ ಆಗಿದ್ದು,ಇವರ ಅಭಿನಯದ ‘ಲಕ್ಷ್ಮಿ ತನಯ’ ಸಿನಿಮಾ ಬಿಡುಗಡೆ ಆಗಬೇಕಿದೆ. ಅವರ ಮುಂದಿನ ಸಿನಿಮಾ ‘ನಿನ್ನ ಸನಿಹಕೆ’ ಚಿತ್ರಕ್ಕೆ ಸಹ ನಿರ್ಮಾಪಕ ಆಗಿ ಸಹ ಸೂರಜ್ ಕೆಲಸ ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಸಿತಾರಾ, ಸಾಧು ಕೋಕಿಲ, ಚಿಕ್ಕಣ್ಣ, ಶಿವು ಕೆ.ಆರ್.ಪೇಟೆ ಧರ್ಮಣ್ಣ ಕಾಣಿಸಿಕೊಳ್ಳಲಿದ್ದಾರೆ.