ಕರ್ನಾಟಕ

karnataka

ETV Bharat / sitara

'ಕಾಲೇಜ್ ಕುಮಾರ' ವಿಕ್ಕಿ ವರುಣ್​ಗೆ ಜೋಡಿಯಾದ ಅಪೂರ್ವ - Kaala Patthar movie heroine Apurva

ಈ ತಿಂಗಳ ಕೊನೆ ವಾರದಿಂದ ‘ಕಾಲಾ ಪತ್ಥರ್’ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ನಾಯಕಿ ಯಾರು ಎಂದು ಚಿತ್ರತಂಡ ನಿನ್ನೆ ಅಧಿಕೃತವಾಗಿ ಘೋಷಿಸಿದೆ.

ನಟಿ ಅಪೂರ್ವ
ನಟಿ ಅಪೂರ್ವ

By

Published : Feb 22, 2021, 12:33 PM IST

'ಕೆಂಡಸಂಪಿಗೆ', 'ಕಾಲೇಜ್‌ ಕುಮಾರ‌' ಚಿತ್ರಗಳ ಯಶಸ್ಸಿನ ನಂತರ ನಟ ವಿಕ್ಕಿ ವರುಣ್‌ ಅವರು 'ಕಾಲಾ ಪತ್ಥರ್’ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ವಿಷಯ ಎಲ್ಲರಿಗೂ ಗೊತ್ತಿದೆ. ಆದರೆ ಇದೀಗ ಚಿತ್ರದ ನಾಯಕಿ ಯಾರು ಎಂಬ ವಿಷಯಕ್ಕೆ ತೆರೆ​ ಬಿದ್ದಿದ್ದು, ನಾಯಕಿ ಯಾರು ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ನಟಿ ಅಪೂರ್ವ

ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ‘ಅಪೂರ್ವ’ ಸಿನಿಮಾದಲ್ಲಿ ನಟಿಸಿದ್ದ ಅಪೂರ್ವ ಅವರನ್ನು ನಾಯಕಿ ಎಂದು ಚಿತ್ರತಂಡ ಘೋಷಿಸಿದೆ. ಇತ್ತೀಚೆಗಷ್ಟೇ 'ಕಾಲಾ ಪತ್ಥರ್' ಚಿತ್ರತಂಡ ನಾಯಕಿ ಅಪೂರ್ವ ಅವರ ಫೋಟೋಶೂಟ್ ನಡೆಸಿದೆ. ಈಗಾಗಲೇ ವಿಕ್ಕಿ ವರುಣ್ ಫಸ್ಟ್​ಲುಕ್ ಸಹ ಬಿಡುಗಡೆ ಮಾಡಲಾಗಿದ್ದು, ಭಾರೀ ಸದ್ದು ಮಾಡುತ್ತಿದೆ.

ನಟಿ ಅಪೂರ್ವ

ಈ ಚಿತ್ರಕ್ಕೆ ಕೆ.ಎಂ ಪ್ರಕಾಶ್ ಸಂಕಲನ ಮಾಡುತ್ತಿದ್ದು, ‘ಒಂದಲ್ಲ ಎರಡಲ್ಲ’ ಸಿನಿಮಾ ನಿರ್ದೇಶಿಸಿರುವ ಸೂತ್ರಧಾರ ಸತ್ಯಪ್ರಕಾಶ್ ಅವರು ‘ಕಾಲಾ ಪತ್ಥರ್’ ಚಿತ್ರಕ್ಕೆ ಕಥೆ ಬರೆದಿರುವುದು ವಿಶೇಷ. ಮತ್ತು ಚೇತನ್ ಅವರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಕ್ಕೆ ಉದಿತ್ ಹರಿತಾಸ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಜೊತೆಗೆ ನವೀನ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ABOUT THE AUTHOR

...view details