ಸ್ಪುರದ್ರೂಪಿ ನಟ ಪ್ರಮೋದ್ ಮದ್ದೂರು ಕಿರುತೆರೆ, ಹಿರಿತೆರೆ ಎರಡರಲ್ಲೂ ಗುರುತಿಸಿಕೊಂಡಿದ್ದಾರೆ. 'ಗೀತಾ ಬ್ಯಾಂಗ್ ಸ್ಟೋರ್'ನಲ್ಲಿ ನಾಯಕನಾಗಿ ಮಿಂಚಿದ್ದ ಪ್ರಮೋದ್, ನಂತರ 'ಪ್ರೀಮಿಯರ್ ಪದ್ಮಿನಿ' ಚಿತ್ರದಲ್ಲಿ ಜಗ್ಗೇಶ್ ಕಾರ್ ಡ್ರೈವರ್ ಆಗಿ ನಟಿಸಿ ತಮ್ಮ ಅಭಿನಯದ ಮೂಲಕ ಜನರ ಮನಸ್ಸಿನಲ್ಲಿ ಛಾಪು ಮೂಡಿಸಿದ್ದರು.
ಪ್ರಮೋದ್ ಮದ್ದೂರು ಅಭಿನಯದ '100 ಮಂಕೀಸ್' ಚಿತ್ರಕ್ಕೆ ನಾಯಕಿ ಫಿಕ್ಸ್ - 100 monkeys hero Pramod madduru
'ಗೀತಾ ಬ್ಯಾಂಗಲ್ ಸ್ಟೋರ್', 'ಪ್ರೀಮಿಯರ್ ಪದ್ಮಿನಿ' ಚಿತ್ರಗಳಲ್ಲಿ ಮಿಂಚಿದ್ದ ಹುಡುಗ ಪ್ರಮೋದ್ ಈದೀಗ ಎರಡು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 100 ಮಂಕೀಸ್, ಇಂಗ್ಲೀಷ್ ಮಂಜ ಎಂಬ ಚಿತ್ರಗಳಲ್ಲಿ ಪ್ರಮೋದ್ ನಟಿಸುತ್ತಿದ್ದು '100 ಮಂಕೀಸ್' ಚಿತ್ರಕ್ಕೆ ಸಂಗೀತ ಶೃಂಗೇರಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಆರು ಅಡಿ ಎತ್ತರದ ಈ ಹ್ಯಾಂಡ್ಸಮ್ ಹುಡುಗ ನಾಯಕನಾಗಿ ನಟಿಸಿದ್ದ 'ಮತ್ತೆ ಉದ್ಭವ' ಸಿನಿಮಾ ಹೇಳಿಕೊಳ್ಳುವಂತ ಯಶಸ್ಸು ಕಾಣಲಿಲ್ಲ. ಶ್ರುತಿ ನಾಯ್ಡು ನಿರ್ಮಾಣದಲ್ಲಿ ತಯಾರಾದ 'ಪ್ರೀಮಿಯರ್ ಪದ್ಮಿನಿ' ಚಿತ್ರದಲ್ಲಿ ಕಾರ್ ಡ್ರೈವರ್ ಪಾತ್ರದಲ್ಲಿ ಗುರುತಿಸಿಕೊಂಡಿದ್ದ ಪ್ರಮೋದ್ ಇದೀಗ '100 ಮಂಕೀಸ್' ಎಂಬ ಸಿನಿಮಾದಲ್ಲಿ ಮತ್ತೆ ಕ್ಯಾಬ್ ಡ್ರೈವರ್ ಪಾತ್ರ ಮಾಡುತ್ತಿದ್ದಾರೆ. ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರವಾಗಿದ್ದು ಜೊತೆ ಥ್ರಿಲ್ಲಿಂಗ್ ಅಂಶಗಳನ್ನು ಕೂಡಾ ಹೊಂದಿದೆಯಂತೆ. ಸೆಪ್ಟೆಂಬರ್ನಲ್ಲಿ '100 ಮಂಕೀಸ್' ಚಿತ್ರೀಕರಣ ಆರಂಭವಾಗಲಿದೆ.
ಈ ಚಿತ್ರದಲ್ಲಿ ನಾಯಕಿ ಆಗಿ ಸಂಗೀತ ಶೃಂಗೇರಿ ನಟಿಸುತ್ತಿದ್ದಾರೆ. ಸಂಗೀತ ಶೃಂಗೇರಿ ಕಿರುತೆರೆಯಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ಬಾಲಾದಿತ್ಯ 'ಇಂಗ್ಲೀಷ್ ಮಂಜ' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚೇತನ್ ಕುಮಾರ್ ಸಂಗೀತ, ಭೀಷ್ಮನ್ ಛಾಯಾಗ್ರಹಣ, ಮಧು ಟಿ. ಸಂಕಲನ ಇರುವ ಈ ಚಿತ್ರವನ್ನು ಕಂಟೆಂಟ್ ಬ್ರಹ್ಮ ಎಂಟರ್ಟೈನ್ಮೆಂಟ್ ಅಡಿಯಲ್ಲಿ ನಿತ್ಯಾನಂದ್ ಭಟ್ ನಿರ್ಮಾಣ ಮಾಡುತ್ತಿದ್ದಾರೆ. ಗಣೇಶ ಚತುರ್ಥಿಂದು '100 ಮಂಕೀಸ್' ಚಿತ್ರದ ಪೋಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡುತ್ತಿದೆ. ಪ್ರಮೋದ್, 'ಇಂಗ್ಲೀಷ್ ಮಂಜ' ಎಂಬ ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.