ಕರ್ನಾಟಕ

karnataka

ETV Bharat / sitara

ಕೊನೆಗೂ 'ಮದಗಜ'ನಿಗೆ ಸಿಕ್ಕಳು ಸುಂದರಿ...ಯಾರಿರಬಹುದು ಊಹಿಸಿ..? - ಮದಗಜ ಚಿತ್ರಕ್ಕೆ ಸಿಕ್ಕಳು ಸುಂದರಿ

ಶ್ರೀ ಮುರಳಿ ಜೊತೆ ರೊಮ್ಯಾನ್ಸ್ ಮಾಡಲು‌ ಕೆಜಿಎಫ್ ಸಿನಿಮಾ ಹೀರೋಯಿನ್ ಶ್ರೀನಿಧಿ ಶೆಟ್ಟಿ , ರಚಿತಾ ರಾಮ್ ಹಾಗೂ ಆಶಿಕಾ ರಂಗನಾಥ್ ಹೆಸರು ಕೇಳಿ ಬಂದಿತ್ತು. ಆದರೆ ಈಗ‌‌ 'ಮದಗಜ' ಸಿನಿಮಾ ನಾಯಕಿ ಆಗಿ ಆಶಿಕಾ ರಂಗನಾಥ್ ಆಯ್ಕೆಯಾಗಿದ್ದಾರೆ.

Ashika Ranganath
ಆಶಿಕಾ ರಂಗನಾಥ್

By

Published : Feb 13, 2020, 8:41 PM IST

'ಭರಾಟೆ' ನಂತರ ರೋರಿಂಗ್ ಸ್ಟಾರ್​ ಶ್ರೀ ಮುರಳಿ‌ 'ಮದಗಜ' ಚಿತ್ರಕ್ಕಾಗಿ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾ ಹೆಸರಿಗೆ ತಕ್ಕಂತೆ ಶ್ರೀಮುರಳಿ ಮದಗಜನಾಗಿ ಮಿಂಚಲು ರೆಡಿಯಾಗಿದ್ದಾರೆ. ಆದರೆ 'ಮದಗಜ' ಚಿತ್ರಕ್ಕೆ ನಾಯಕಿ ಯಾರಾಗ್ತಾರೆ ಎಂಬ ಕುತೂಹಲ ಎಲ್ಲರಿಗಿತ್ತು. ಈ ಬಗ್ಗೆ ಗಾಂಧಿನಗರದಲ್ಲಿ ಚರ್ಚೆ ಕೂಡಾ ಶುರುವಾಗಿತ್ತು. ಈ ಚರ್ಚೆಗೆ ಇದೀಗ ಫುಲ್​​ ಸ್ಟಾಪ್ ಬಿದ್ದಿದೆ.

'ಮದಗಜ' ಚಿತ್ರದ ನಾಯಕಿ ಯಾರೆಂದು ಹೇಳುತ್ತಿರುವ ಶ್ರೀಮುರಳಿ

ಶ್ರೀ ಮುರಳಿ ಜೊತೆ ರೊಮ್ಯಾನ್ಸ್ ಮಾಡಲು‌ ಕೆಜಿಎಫ್ ಸಿನಿಮಾ ಹೀರೋಯಿನ್ ಶ್ರೀನಿಧಿ ಶೆಟ್ಟಿ , ರಚಿತಾ ರಾಮ್ ಹಾಗೂ ಆಶಿಕಾ ರಂಗನಾಥ್ ಹೆಸರು ಕೇಳಿ ಬಂದಿತ್ತು. ಆದರೆ ಈಗ‌‌ 'ಮದಗಜ' ಸಿನಿಮಾ ನಾಯಕಿ ಯಾರು ಎನ್ನವುದನ್ನು ಸ್ವತಃ ಶ್ರೀಮುರಳಿ ಬಾಯಿ ಬಿಟ್ಟಿದ್ದಾರೆ. ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ 'ಮದಗಜ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 'ಅಯೋಗ್ಯ' ಸಿನಿಮಾ ನಂತರ ಮಹೇಶ್ ಕುಮಾರ್ 'ಮದಗಜ' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇವರೊಂದಿಗೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕೂಡಾ ಜೊತೆಯಾಗಿದ್ದಾರೆ.

'ಮದಗಜ' ಚಿತ್ರದ ನಾಯಕಿ ಆಶಿಕಾ ರಂಗನಾಥ್

ಮುರಳಿ ಹಾಗೂ ಪ್ರಶಾಂತ್ ಇಬ್ಬರೂ ಸಂಬಂಧಿಗಳಾಗಿದ್ದು ಬರವಣಿಗೆ ವಿಭಾಗದಲ್ಲಿ ಪ್ರಶಾಂತ್ ನೀಲ್, ನಿರ್ದೇಶಕ ಮಹೇಶ್ ಅವರಿಗೆ ಜೊತೆಯಾಗಿದ್ದಾರೆ. ಅಲ್ಲದೆ ಈ ಚಿತ್ರಕ್ಕಾಗಿ ತಮ್ಮ ಐಡಿಯಾಗಳನ್ನು ಕೂಡಾ ನೀಡಲಿದ್ದಾರಂತೆ ಪ್ರಶಾಂತ್. ಇನ್ನು ಉಮಾಪತಿ 'ಮದಗಜ' ಚಿತ್ರವನ್ನು ನಿರ್ಮಿಸುತ್ತಿದ್ದು ಅರ್ಜುನ್ ಜನ್ಯಾ ಚಿತ್ರದ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಇದೇ ತಿಂಗಳ 20 ರಿಂದ 'ಮದಗಜ' ಚಿತ್ರದ ಶೂಟಿಂಗ್ ಆರಂಭವಾಗಲಿದೆ.

ಆಶಿಕಾ ರಂಗನಾಥ್

ABOUT THE AUTHOR

...view details