ರಿಷಭ್ ಶೆಟ್ಟಿ ಅಭಿನಯದ 'ಹೀರೋ' ಸಿನಿಮಾ ಯಾವಾಗ ಬಿಡುಗಡೆಯಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಸಿನಿಮಾ ಮಾರ್ಚ್ 5ಕ್ಕೆ ಬಿಡುಗಡೆಯಾಗಲಿದೆ ಎಂದು ರಿಷಭ್ ಶೆಟ್ಟಿ ಘೋಷಿಸುವುದರ ಜೊತೆಗೆ ಅಶೋಕವನ ಎಸ್ಟೇಟ್‍ಗೆ ಸ್ವಾಗತವನ್ನೂ ಕೋರಿದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.
ಅಶೋಕ ವನಕ್ಕೆ ಸ್ವಾಗತ ಕೋರಲು ಮಾರ್ಚ್ನಲ್ಲಿ ಬರುತ್ತಿರುವ 'ಹೀರೋ' - Bharat raj direction movie
ಭರತ್ ರಾಜ್ ನಿರ್ದೇಶನದಲ್ಲಿ ರಿಷಭ್ ಶೆಟ್ಟಿ ಹಾಗೂ ಗಾನವಿ ಲಕ್ಷ್ಮಣ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಹೀರೋ ಸಿನಿಮಾ ಮಾರ್ಚ್ 5 ಕ್ಕೆ ಬಿಡುಗಡೆಯಾಗುತ್ತಿದೆ. ಇದಕ್ಕೂ ಮುನ್ನ ಈ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ರಿಷಭ್ ಹಾಗೂ ಚಿತ್ರತಂಡ ಪ್ಲ್ಯಾನ್ ಮಾಡಿದ್ದರಂತೆ. ಆದರೆ ಟೀಸರ್ಗೆ ದೊರೆತ ಪ್ರತಿಕ್ರಿಯೆ ನೋಡಿ ಥಿಯೇಟರ್ನಲ್ಲಿ ರಿಲೀಸ್ ಮಾಡಲು ನಿರ್ಧರಿಸಿದೆ.
ಇದನ್ನೂ ಓದಿ:ನಟಿ ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್
ಫೆಬ್ರವರಿ 11ಕ್ಕೆ ಚಿತ್ರತಂಡದ ವತಿಯಿಂದ ಒಂದು ಘೋಷಣೆಯಿದೆ ಎಂದು ರಿಷಭ್ ಮೊದಲೇ ಹೇಳಿಕೊಂಡಿದ್ದರು. ಸಿನಿಮಾ ಫೆಬ್ರವರಿಯಲ್ಲೇ ಬಿಡುಗಡೆಯಾಗಬಹುದು ಎಂದು ಮೊದಲೇ ಅಂದಾಜಿಸಿದ್ದರಿಂದ ಸಿನಿಮಾ ಬಿಡುಗಡೆ ಬಗ್ಗೆಯೇ ಏನೋ ಅನೌನ್ಸ್ಮೆಂಟ್ ಇರಬಹುದು ಎನ್ನಲಾಗಿತ್ತು. ಈ ಊಹೆ ನಿಜವಾಗಿದ್ದು ಮಾರ್ಚ್ 5 ಕ್ಕೆ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ರಿಷಭ್ ಹೇಳಿಕೊಂಡಿದ್ದಾರೆ. ಈ ಮೊದಲು ಅವರು ಈ ಚಿತ್ರವನ್ನು ಓಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲು ಯೋಚಿಸಿದ್ದರಂತೆ. ಆದರೆ ಸಿನಿಮಾದ ಟೀಸರ್ಗೆ ಸಿಕ್ಕ ಪ್ರತಿಕ್ರಿಯೆ ನೋಡಿ, ಸಿನಿಮಾವನ್ನು ಥಿಯೇಟರ್ನಲ್ಲೇ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಈ ಚಿತ್ರದಲ್ಲಿ ರಿಷಭ್ ಶೆಟ್ಟಿ ಜೊತೆಗೆ ಮಗಳು ಜಾನಕಿ ಧಾರಾವಾಹಿ ಖ್ಯಾತಿಯ ಗಾನವಿ ಲಕ್ಷ್ಮಣ್ ಜೋಡಿಯಾಗಿ ನಟಿಸಿದ್ದಾರೆ. ಇವರೊಂದಿಗೆ ಪ್ರಮೋದ್ ಶೆಟ್ಟಿ ಹಾಗೂ ಇನ್ನಿತರು ನಟಿಸಿದ್ದಾರೆ. ಭರತ್‍ರಾಜ್ ಈ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಸಂಗೀತವಿರುವ ಈ ಚಿತ್ರವನ್ನು ಚಿಕ್ಕಮಗಳೂರಿನ ಎಸ್ಟೇಟ್ವೊಂದರಲ್ಲಿ ಸಂಪೂರ್ಣವಾಗಿ ಚಿತ್ರೀಕರಿಸಲಾಗಿರುವುದು ವಿಶೇಷ.