ಕರ್ನಾಟಕ

karnataka

ETV Bharat / sitara

ಮುಂದಿನ ವರ್ಷದ ಆರಂಭಕ್ಕೆ ಸೆಟ್ಟೇರಲಿದ್ದಾನೆ 'ಕಿಲಾಡಿ'ಯ 'ಬಚ್ಚನ್​ ಪಾಂಡೆ' - ಅಕ್ಷಯ್​​ ಕುಮಾರ್​ ಅಭಿನಯದ 'ಬಚ್ಚನ್​ ಪಾಂಡೆ

ಅಕ್ಷಯ್​​ ಕುಮಾರ್​ ಅಭಿನಯದ ಮುಂಬರುವ ಚಿತ್ರ 'ಬಚ್ಚನ್​ ಪಾಂಡೆ ' ಶೂಟಿಂಗ್​ ಮುಂದಿನ ವರ್ಷ(2021) ಪ್ರಾರಂಭ ಮಾಡಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ..

Here's when Akshay Kumar, Kriti Sanon will begin shoot for Bachchan Pandey
ಮುಂದಿನ ವರ್ಷದ ಆರಂಭಕ್ಕೆ ಸೆಟ್ಟರಲಿದ್ದಾನೆ 'ಬಚ್ಚನ್​ ಪಾಂಡೆ'

By

Published : Nov 3, 2020, 3:54 PM IST

ಬಾಲಿವುಡ್​​ ಕಿಲಾಡಿ ಅಕ್ಷಯ್​​ ಕುಮಾರ್​ ಅಭಿನಯದ ಮುಂಬರುವ ಚಿತ್ರ 'ಬಚ್ಚನ್​ ಪಾಂಡೆ ' ಶೂಟಿಂಗ್​ ಮುಂದಿನ ವರ್ಷ(2021) ಪ್ರಾರಂಭ ಮಾಡಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ. ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​ಗೆ ಜೋಡಿಯಾಗಿ ಕೃತಿ ಸನನ್​ ಕಾಣಿಸಲಿದ್ದಾರೆ.

ಈಗಾಗಲೇ 'ಬಚ್ಚನ್ ಪಾಂಡೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರಕ್ಕೆ ಫರ್ಹಾದ್ ಸಂಜಿ ಆ್ಯಕ್ಷನ್-ಕಟ್​ ಹೇಳುತ್ತಿದ್ದು, ಸಜಿಲ್​ ನಾಡಿಯವಾಲಾ ಬಂಡವಾಳ ಹಾಕುತ್ತಿದ್ದಾರೆ. ಇನ್ನು ಸದ್ಯದ ಮಾಹಿತಿ ಪ್ರಕಾರ ಬಚ್ಚನ್​ ಪಾಂಡೆ ಸಿನಿಮಾ 2021ರ ಮಾರ್ಚ್‌​​ನಲ್ಲಿಯೇ ಸೆಟ್ಟೇರುವ ಸಾಧ್ಯತೆ ಇದೆ.

ಅಕ್ಷಯ್​ ಕುಮಾರ್​​ ಈಗಾಗಲೇ ಸ್ಕಾಟ್ಲೆಂಡ್‌ನಲ್ಲಿ 'ಬೆಲ್ ಬಾಟಮ್' ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದು, ಯಶ್ ರಾಜ್ ಫಿಲ್ಮ್​​​​ ನಿರ್ಮಾಣದ ಪೃಥ್ವಿರಾಜ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ABOUT THE AUTHOR

...view details