ಕರ್ನಾಟಕ

karnataka

ETV Bharat / sitara

ರಶ್ಮಿಕಾ ಜೊತೆ ಮದುವೆ ವರದಿ: 'ನಾನ್ಸೆನ್ಸ್' ಎಂದ ವಿಜಯ್ ದೇವರಕೊಂಡ - ಗೀತ ಗೋವಿಂದಂ ಜೋಡಿ

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಜೊತೆ ಮದುವೆಯಾಗುವ ವರದಿ ಬಗ್ಗೆ ಟಾಲಿವುಡ್​ ನಟ ವಿಜಯ್ ದೇವರಕೊಂಡ 'ನಾನ್ಸೆನ್ಸ್' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ

By

Published : Feb 22, 2022, 3:54 PM IST

ಅರ್ಜುನ್ ರೆಡ್ಡಿ ಖ್ಯಾತಿಯ ಟಾಲಿವುಡ್​ ನಟ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಅಷ್ಟೇ ಅಲ್ಲ ಇತ್ತೀಚೆಗಷ್ಟೇ 'ಗೀತ ಗೋವಿಂದಂ' ಜೋಡಿ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂದೂ ವರದಿಯಾಗಿತ್ತು.

ಈ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯ್ ದೇವರಕೊಂಡ ತಮ್ಮ ಟ್ವಿಟರ್​​ ಖಾತೆಯಲ್ಲಿ "ಎಂದಿನಂತೆ ನಾನ್ಸೆನ್ಸ್​.. ನಾವು ಈ ಸುದ್ದಿಯನ್ನು ಕೇವಲ ಪ್ರೀತಿಸುವುದಿಲ್ಲವೇ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನಿಜ ಜೀವನದಲ್ಲೂ ಜೋಡಿಯಾಗಲಿದ್ದಾರಾ ಗೀತ-ಗೋವಿಂದಂ..?

'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಪ್ರೀತಿಯ ಬಲೆಯಲ್ಲಿ ಬಿದ್ದಿವೆ ಎಂಬ ಗುಸುಗುಸು ಈ ಹಿಂದಿನಿಂದಲೂ ಕೇಳಿ ಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವ ರೀತಿಯಲ್ಲಿ ಒಮ್ಮೆ ಮುಂಬೈನ ರೆಸ್ಟೋರೆಂಟ್​​ವೊಂದರಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಅಷ್ಟೇ ಅಲ್ಲ ಈ ಬಾರಿ ಹೊಸ ವರ್ಷವನ್ನು ಇವರಿಬ್ಬರು ಕುಟುಂಬ ಸಮೇತರಾಗಿ ಗೋವಾದಲ್ಲಿ ಆಚರಿಸಿದ್ದರು.

ABOUT THE AUTHOR

...view details