ಕರ್ನಾಟಕ

karnataka

ETV Bharat / sitara

ದಿಶಾ ಪಟಾಣಿ ಬರ್ತ್​​ ಡೇ.. ರಾಕ್​ಸ್ಟಾರ್​​ ಎಂದು ವಿಶ್​​ ಮಾಡಿದ 'ಟೈಗರ್'.. - tiger disha relationship

ಟೈಗರ್​​ ಶ್ರಾಫ್​ ಶೇರ್​​ ಮಾಡಿರುವ ಈ ಪೋಸ್ಟ್‌ನ ಬರೋಬ್ಬರಿ 1.4 ಮಿಲಿಯನ್​ ಮಂದಿ ವೀಕ್ಷಿಸಿದ್ದಾರೆ. ಇನ್ನು ಈ ಪೋಸ್ಟ್​​​ಗೆ ದಿಶಾ ಗೆಳತಿ ಹಾಗೂ ಟೈಗರ್​​ ಶ್ರಾಫ್​ ಸಹೋದರಿ ಕೃಷ್ಣಾ ಕಮೆಂಟ್​​ ಮಾಡಿದ್ದು, ಕ್ಯೂಟ್​​ ಎವರ್​​ ಎಂದು ಬರೆದಿದ್ದಾರೆ.

Here's how Tiger Shroff wished rumoured GF Disha Patani on birthday
ದಿಶಾ ಪಟಾಣಿ ಬರ್ತ್​​ ಡೇ : ರಾಕ್​ಸ್ಟಾರ್​​ ಎಂದು ವಿಶ್​​ ಮಾಡಿದ್ರು ಟೈಗರ್​ ಶ್ರಾಫ್​​

By

Published : Jun 13, 2020, 6:54 PM IST

ಇಂದು ಬಾಲಿವುಡ್​​ ನಟಿ ದಿಶಾ ಪಟಾಣಿಯ 29ನೇ ಹುಟ್ಟು ಹಬ್ಬ. ಆ್ಯಕ್ಷನ್​ ಸ್ಟಾರ್​​ ಟೈಗರ್​ಶ್ರಾಫ್​​ ತನ್ನ ಗೆಳತಿಗೆ ರಾಕ್​ಸ್ಟಾರ್​​ ಎಂದು ವಿಶ್​​ ಮಾಡಿದ್ದಾರೆ. ಈ ಹಿಂದೆ ಈ ಇಬ್ಬರ ನಡುವೆ ಪ್ರೀತಿ ಇದೆ ಎಂಬ ಗುಸುಗುಸು ಬಾಲಿವುಡ್​​ ವಲಯದಲ್ಲಿ ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿಯೇ ಟೈಗರ್​ ಶ್ರಾಫ್​ ವಿಶ್​​ ಮಾಡಿದ್ದು, ಇದೀಗ ಈ ಇಬ್ಬರ ಬಗೆಗಿನ ಚರ್ಚೆಗಳು ಜಾಸ್ತಿಯಾಗಿವೆ.

ವಿಡಿಯೋ ಒಂದನ್ನು ಶೇರ್​​ ಮಾಡಿ ವಿಶ್​​ ಮಾಡಿರುವ ಟೈಗರ್​ ಶ್ರಾಫ್​​, ಹ್ಯಾಪಿ ಬರ್ತ್‌ಡೇ ದಿಶಾ ಪಟಾಣಿ ಎಂದು ಬರೆದಿದ್ದಾರೆ. ಇದರ ಜೊತೆಗೆ ಮೂರು ದೋಸೆ ಮೂರು ಪಾನ್​ಕೇಕ್ಸ್​​ ಲೇಟರ್(3 waffles and 3 pancakes later)​​ ಎಂದು ಬರೆದಿದ್ದಾರೆ. ಟೈಗರ್​​ ಶ್ರಾಫ್​ ಶೇರ್​​ ಮಾಡಿರುವ ಈ ಪೋಸ್ಟ್‌ನ ಬರೋಬ್ಬರಿ 1.4 ಮಿಲಿಯನ್​ ಮಂದಿ ವೀಕ್ಷಿಸಿದ್ದಾರೆ. ಇನ್ನು ಈ ಪೋಸ್ಟ್​​​ಗೆ ದಿಶಾ ಗೆಳತಿ ಹಾಗೂ ಟೈಗರ್​​ ಶ್ರಾಫ್​ ಸಹೋದರಿ ಕೃಷ್ಣಾ ಕಮೆಂಟ್​​ ಮಾಡಿದ್ದು, ಕ್ಯೂಟ್​​ ಎವರ್​​ ಎಂದು ಬರೆದಿದ್ದಾರೆ.

ದಿಶಾ ಇತ್ತೀಚೆಗೆ ಮಲಾಂಗ್​ ಸಿನಿಮಾದಲ್ಲಿ ಅಭಿನಯಿಸಿದ್ದರು. ಅಲ್ಲದೆ ಸಲ್ಮಾನ್​ ಖಾನ್​​ ಅಭಿನಯದ ಮುಂಬರುವ ಚಿತ್ರ ರಾಧೆಯಲ್ಲೂ ದಿಶಾ ಬಣ್ಣ ಹಚ್ಚಿದ್ದಾರೆ.

ABOUT THE AUTHOR

...view details