ಬೆಂಗಳೂರು:ಸ್ಯಾಂಡಲ್ವುಡ್ನ ಹಾಸ್ಯನಟ ಬುಲೆಟ್ ಪ್ರಕಾಶ್ ನಿನ್ನೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇಂದು ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಡೆಸಲು ಮುಂದಾಗುತ್ತಿದ್ದಂತೆ ಕಲ್ಲು ಹೃದಯವೂ ಕರಗುವ ಸನ್ನಿವೇಶ ನಡೆಯಿತು.
ಪ್ರಕಾಶ್ ತಾನು ಪ್ರೀತಿಯಿಂದ ಸಾಕಿದ್ದ ನಾಯಿ ಮರಿಗೆ ಟೈಸನ್ ಎಂದು ಹೆಸರಿಟ್ಟಿದರು. ಅಂತ್ಯಕ್ರಿಯೆ ನಡೆಸಲು ಮುಂದಾಗುತ್ತಿದ್ದಂತೆ ತಾನು ಅತ್ಯಂತ ಪ್ರೀತಿಯಿಂದ ಸಾಕಿದ್ದ ಟೈಸನ್ ರುದ್ರಭೂಮಿಯಲ್ಲಿ ಶವ ಪೆಟ್ಟಿಗೆ ಮೇಲೇರಿ ಕುಳಿತುಕೊಂಡಿತು. ಈ ಮೂಲಕ ತನ್ನ ಒಡೆಯನನ್ನು ಎಲ್ಲಿಗೂ ಕೊಂಡೊಯ್ಯದಂತೆ ತನ್ನ ಕೈಲಾದ ಮಟ್ಟಿಗೆ ತಡೆಯೊಡ್ಡಿತು. ಒಡೆಯನ ಸಾವಿನಿಂದ ಆತಂಕಕ್ಕೊಳಗಾಗಿದ್ದ ನಾಯಿ ಯಜಮಾನನ ಅಂತ್ಯ ಸಂಸ್ಕಾರದ ವೇಳೆ ಮಮ್ಮಲ ಮರುಗಿತು.