ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಡಿಸ್ಚಾರ್ಜ್ ಆಗಿ ಮನೆಗೆ ಮರಳಿರುವ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಸದ್ಯ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಕ್ವಾರಂಟೈನ್ನಲ್ಲೇ ಧ್ರುವ ತಮ್ಮ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸಿದ್ದಾರೆ.
ಫಿಟ್ನೆಸ್ ಕಾಯ್ದುಕೊಳ್ಳಲು ಮನೆಯಲ್ಲೇ ವರ್ಕೌಟ್ ಆರಂಭಿಸಿದ್ದು, ಇತ್ತೀಚಿಗಷ್ಟೇ ವರ್ಕೌಟ್ ವಿಡಿಯೋವೊಂದನ್ನು ಧ್ರುವ ಶೇರ್ ಮಾಡಿದ್ರು. ಇದೀಗ ಮತ್ತೊಂದು ಚಿಕ್ಕ ವಿಡಿಯೋವನ್ನು ಹಂಚಿಕೊಂಡಿರೋ ಆ್ಯಕ್ಷನ್ ಪ್ರಿನ್ಸ್, ಇಂದು ಬೆಳಗಿನ ಜಾವ 5 ಗಂಟೆಗೆ ಎದ್ದು ಜಾಗಿಂಗ್ ಮಾಡಿ ಬಳಿಕ ಮನೆಯಲ್ಲೇ ವರ್ಕೌಟ್ ಮಾಡಿದ್ದಾರೆ.
ಈ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರೋ ಧ್ರುವ, ಮನೆಯಲ್ಲೇ ಇಮ್ಯುನಿಟಿ ಹೆಚ್ಚಿಸೋ ಕಷಾಯ, ಆಹಾರ ಪದಾರ್ಥಗಳನ್ನ ಸೇವಿಸಿ ಕೊರೊನಾಗೆ ಟಕ್ಕರ್ ಕೊಡ್ತಿದ್ದಾರೆ.
ಆ್ಯಕ್ಷನ್ ಪ್ರಿನ್ಸ್ ಹೆಲ್ತ್ ಸೀಕ್ರೆಟ್ ಅಣ್ಣ ಚಿರಂಜೀವಿ ಸರ್ಜಾ ಅಗಲಿಕೆ ಹಿನ್ನೆಲೆ ಡಿಪ್ರೆಷನ್ಗೆ ಹೋಗಿದ್ದ ಧ್ರುವ ಬಗ್ಗೆ, ಬೇಗ ಮೊದಲಿನಂತೆ ಆಗಲಿ ನಮ್ಮಣ್ಣ ಅಂತ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದ್ರು. ಇದೀಗ ಧ್ರುವರ ಈ ರಿಫ್ರೆಷಿಂಗ್ ವಿಡಿಯೋ ನೋಡಿದ ಬಳಿಕ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಲ್ಲದೇ ಕೊರೊನಾ ಕಂಟ್ರೋಲ್ ಆದ ಬಳಿಕ ಪೊಗರು ಶೂಟಿಂಗ್ಗೆ ಹಾಜರಾಗಲಿದ್ದಾರೆ. ಜೊತೆಗೆ ಅಣ್ಣ ಚಿರು ಅಭಿನಯದ ಕ್ಷತ್ರಿಯ ಹಾಗೂ ರಾಜ ಮಾರ್ತಾಂಡ ಚಿತ್ರಗಳಿಗೆ ಡಬ್ಬಿಂಗ್ ಮಾಡಲಿದ್ದಾರೆ ಅಂತ ಆ್ಯಕ್ಷನ್ ಪ್ರಿನ್ಸ್ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.