ಸಿನಿಮಾ ರಂಗದಲ್ಲಿ ಇರುವವರ ಮಕ್ಕಳೂ ಕೂಡ ಸಿನಿಮಾ ತಾರೆಯರಾಗುತ್ತಾರೆ ಎಂಬ ಮಾತು ಸೈಫ್ ಅಲಿಖಾನ್ ಕುಟುಂಬದಿಂದ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಯಾಕಂದ್ರೆ ತಮ್ಮ ಇಬ್ಬರು ಮಕ್ಕಳು ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಈಗಾಗಲೇ ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿಖಾನ್ ಕೂಡ ಚಿತ್ರ ರಂಗ ಪ್ರವೇಶಿಸಿದ್ದು, ಹೆಸರು ಮಾಡಿದ್ದಾರೆ. ಇದೀಗ ಆಕೆಯ ಸಹೋದರ ಇಬ್ರಾಹಿಂ ಕೂಡ ಬಾಲಿವುಡ್ಗೆ ಎಂಟ್ರಿ ಕೊಡಲು ಸಿದ್ದನಾಗಿದ್ದಾನೆ ಎಂದು ಸ್ವತ: ಇಬ್ರಾಹಿಮ್ ತಂದೆ ಸೈಫ್ ಅಲಿಖಾನ್ ತಿಳಿಸಿದ್ದಾರೆ.
ಇಬ್ರಾಹಿಮ್ ಈಗಗಲೇ ಸಿನಿಮಾಕ್ಕೆ ತಯಾರಾಗುತ್ತಿದ್ದಾನೆ. ನನ್ನ ಮಕ್ಕಳು ನಟನೆಯಲ್ಲಿ ಮುಂದುವರೆಯುವುದು ನನಗೆ ಖುಷಿ. ಅಲ್ಲದೆ ಚಿತ್ರರಂಗ ಕೆಲಸ ಮಾಡಲು ಒಂದೊಳ್ಳೆ ಜಾಗ ಎಂದು ಸೈಫ್ ಹೇಳಿದ್ದಾರೆ. ತಮ್ಮ ಹಿಂದಿನ ನೆನಪುಗಳನ್ನು ಮೆಲುಕು ಹಾಕಿರುವ ಸೈಫ್, ನಾನು 17-18 ವರ್ಷದವನಿದ್ದಾಗ ನನಗೆ ಕೆಲವು ಕಷ್ಟಗಳು ಎದುರಾದವು. ಆ ವೇಳೆ ನನ್ನನ್ನು ಕೈ ಹಿಡಿದಿದ್ದು ಈ ನಟನೆ ಎಂದಿದ್ದಾರೆ.
ನನ್ನ ಮಗ ನೋಡಲು ನನಗಿಂತ ಸುಂದರವಾಗಿದ್ದಾನೆ. ನಮ್ಮ ಇಡೀ ಕುಟುಂಬ ನಟನೆಯಲ್ಲಿಯೇ ಇದೆ. ನನ್ನ ಮಕ್ಕಳು ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆ. ನಾವೆಲ್ಲರೂ ಚಿತ್ರರಂಗದಲ್ಲಿ ಇದ್ದೇವೆ. ಅಲ್ಲದೆ ನನ್ನ ಮಗನ ಏಳಿಗೆಗೆ ಬೇಕಾಗುವ ಎಲ್ಲವನ್ನೂ ಮಾಡುವುದಾಗಿ ಸೈಫ್ ಅಲಿಖಾನ್ ತಿಳಿಸಿದ್ದಾರೆ.