ಕರ್ನಾಟಕ

karnataka

ETV Bharat / sitara

ನಿಖಿಲ್ ಕುಮಾರಸ್ವಾಮಿ ಬರ್ತ್​ಡೇ : ತಂದೆ ಹೆಚ್​ಡಿಕೆ, ಸಹೋದರ ಪ್ರಜ್ವಲ್​ ರೇವಣ್ಣ ವಿಶ್​ ಮಾಡಿದ್ದು ಹೀಗೆ.. - ನಿಖಿಲ್ ಬರ್ತ್​ಡೇಗೆ ಹೆಚ್​ಡಿಕೆ ವಿಶ್​

ನಟ, ಜೆಡಿಎಸ್‍ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಜನ್ಮದಿನಕ್ಕೆ ತಂದೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಹೋದರ, ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಟ್ವೀಟ್​ ಮಾಡಿ ವಿಶ್​ ಮಾಡಿದ್ದಾರೆ.

Nikhil Kumaraswamy
ನಿಖಿಲ್ ಕುಮಾರಸ್ವಾಮಿ ಬರ್ತ್​ಡೇ

By

Published : Jan 22, 2022, 4:48 PM IST

ಬೆಂಗಳೂರು :ನಟ, ಜೆಡಿಎಸ್‍ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ತಂದೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೂಡ ಮಗನ ಜನ್ಮದಿನಕ್ಕೆ ಶುಭ ಕೋರಿದ್ದು, "ಪ್ರೀತಿಯ ಪುತ್ರ, ಗೆಳೆಯನಂಥ ಆಪ್ತ ಹಾಗೂ ರಾಜ್ಯ ಯುವ ಜನತಾದಳ ಅಧ್ಯಕ್ಷರೂ ಆಗಿರುವ ನಿಖಿಲ್ ಕುಮಾರ್​ಗೆ ಜನ್ಮದಿನದ ಶುಭ ಹಾರೈಕೆಗಳು. ಕಂದ, ನಿನ್ನೆಲ್ಲ ಕನಸುಗಳು ಈಡೇರಲಿ. ಆ ಭಗವಂತ ನಿನಗೆ ಎಲ್ಲವನ್ನೂ ಒಳ್ಳೆಯದೇ ಮಾಡಲಿ ಎಂದು ಆಶೀರ್ವದಿಸುತ್ತೇನೆ" ಎಂದು ಟ್ವೀಟ್​ ಮಾಡಿದ್ದಾರೆ.

ಇತ್ತ ಸಹೋದರ ಹಾಗೂ ಹಾಸನ ಸಂಸದರಾಗಿರುವ ಪ್ರಜ್ವಲ್​ ರೇವಣ್ಣ ಕೂಡ ಟ್ವಟರ್​ನಲ್ಲಿ ವಿಶ್​ ಮಾಡಿದ್ದಾರೆ. "ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಹಾಗೂ ಯುವ ಜನತಾದಳದ ರಾಜ್ಯಾಧ್ಯಕ್ಷರಾದ ಆತ್ಮೀಯ ಸಹೋದರ ಶ್ರೀ ನಿಖಿಲ್ ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳು.

ನಿಮ್ಮೆಲ್ಲಾ ಇಷ್ಟಾರ್ಥಗಳು ಈಡೇರಲಿ, ಭಗವಂತನು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಪ್ರಜ್ವಲ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್‌ವುಡ್ 'ಯುವರಾಜ'ನ ಹುಟ್ಟುಹಬ್ಬ : ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿವೀಲ್

'ರೈಡರ್​' ಸಿನಿಮಾ ಸಕ್ಷಸ್​ನಲ್ಲಿರುವ ನಿಖಿಲ್​ಗೆ ಇಂದು ಹುಟ್ಟುಹಬ್ಬದ ಪ್ರಯುಕ್ತ ಅವರ ಮುಂದಿನ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಅನ್ನು ರಿವೀಲ್ ಮಾಡಲಾಗಿದೆ. ಈ ಸಿನಿಮಾಕ್ಕೆ 'ಯದುವೀರ' ಎಂಬ ಕ್ಯಾಚಿ ಟೈಟಲ್ ಇಡಲಾಗಿದ್ದು, ನಿಖಿಲ್ ಕುಮಾರಸ್ವಾಮಿಯ 5ನೇ ಚಿತ್ರ ಇದಾಗಿರಲಿದೆ.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details