ಗೌರಿ-ಗಣೇಶ ಹಬ್ಬ ಮುಗಿದರೂ ಇನ್ನೂ ಸಂಭ್ರಮ ಮಾತ್ರ ಕಡಿಮೆ ಆಗಿಲ್ಲ. ಇನ್ನೂ ಒಂದು ವಾರ ಗಲ್ಲಿ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶನ ಮುಂದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಜೊತೆಗೆ ಅದ್ಧೂರಿ ನಿಮಜ್ಜನ ಕೂಡಾ ಇರಲಿದೆ.
ಪಬ್ಜಿ ಗಣೇಶ, ಬಾಹ್ಯಾಕಾಶ ಗಣೇಶ ಆಯ್ತು... ಮಹೇಶ್ ಬಾಬು ಗಣೇಶ ನೋಡಿದ್ದೀರಾ? - ಟಾಲಿವುಡ್ ಚಿತ್ರ ನಿರ್ಮಾಪಕ
ಪ್ರತಿ ಬಾರಿಯಂತೆ ಈ ಬಾರಿ ಕೂಡಾ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಗಣಪತಿ ಮೂರ್ತಿಗಳನ್ನು ತಯಾರಿಸಲಾಗಿದೆ. ಹೈದರಾಬಾದ್ನ ಮಹೇಶ್ ಬಾಬು ಅಭಿಮಾನಿಗಳು ಗಣೇಶ ಮೂರ್ತಿ ತಯಾರಕರ ಬಳಿ ಹೇಳಿ 'ಸರಿಲೇರು ನೀಕೆವರು' ಗಣೇಶನನ್ನು ತಯಾರಿಸಿ ಪೂಜಿಸಿದ್ದಾರೆ.
ಇನ್ನು ಪ್ರತಿ ಬಾರಿ ಜನರನ್ನು ಆಕರ್ಷಿಸಲು ಗಣೇಶ ಮೂರ್ತಿ ತಯಾರಕರು ವಿಭಿನ್ನ ಕಾನ್ಸೆಪ್ಟ್ ಹುಡುಕುತ್ತಾರೆ. ದಿನನಿತ್ಯದ ಆಗುಹೋಗುಗಳಿಗೆ ಸಂಬಂಧಿಸಿದಂತೆ ತಯಾರಾದ ಗಣೇಶ ಮೂರ್ತಿಗಳು ಬಹಳಷ್ಟು ಮಾರಾಟವಾಗಿವೆ. ಎಂಸೀಲ್ ಗಣೇಶ, ತೆಂಗಿನಕಾಯಿ ಗಣೇಶ, ಶಂಖದ ಚಿಪ್ಪುಗಳ ಗಣೇಶ ಹೀಗೆ ವಿವಿಧ ಗಣೇಶನನ್ನು ನೀವು ನೋಡಿದ್ದೀರಿ. ಆದರೆ ತೆಲುಗು ನಟ ಮಹೇಶ್ ಬಾಬು ಗಣೇಶನನ್ನು ನೀವು ನೋಡಿದ್ದೀರಾ? ಹೈದರಾಬಾದ್ನ ಮಹೇಶ್ ಬಾಬು ಅಭಿಮಾನಿಗಳು ಗಣೇಶ ಮೂರ್ತಿ ತಯಾರಕರ ಬಳಿ ಹೇಳಿ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವರು' ಚಿತ್ರದ ಗಣೇಶನನ್ನು ಮಾಡಿಸಿಕೊಂಡು ಅದಕ್ಕೆ ಪೂಜೆ ಕೂಡಾ ಮಾಡಿದ್ದಾರೆ.
ಈ 'ಸರಿಲೇರು ನೀಕೆವರು' ಗಣೇಶನ ಫೋಟೋ ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಟಾಲಿವುಡ್ ಚಿತ್ರ ನಿರ್ಮಾಪಕ ಅನಿಲ್ ಸುಂಕರ ಈ 'ಸರಿಲೇರು ನೀಕೆವರು' ಗಣೇಶನ ವಿಡಿಯೋವೊಂದನ್ನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಿಲಿಟರಿ ಯೂನಿಫಾರ್ಮ್, ಟೋಪಿ ಧರಿಸಿ ಕೈಯ್ಯಲ್ಲಿ ರೈಫಲ್ ಹಿಡಿದಿರುವ ಈ ಗಣೇಶನಿಗೆ ಕೆಲವರು ಲೈಕ್ ನೀಡಿ ಇಷ್ಟಪಟ್ಟು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ಹೀಗೂ ಉಂಟಾ ಎನ್ನುತ್ತಿದ್ದಾರೆ.