ಬಾಲನಟನಾಗಿ ಕರಿಯರ್ ಆರಂಭಿಸಿ, ಈಗ ನಾಯಕನಾಗಿಯೂ ಮಿಂಚುತ್ತಿರುವ ನಟ ಎಂದರೆ ಪುನೀತ್ ರಾಜ್ಕುಮಾರ್. ಪವರ್ ಸ್ಟಾರ್ ಎಂದೇ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಪುನೀತ್ ರಾಜ್ಕುಮಾರ್ ಎಂದರೆ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಬಹಳ ಇಷ್ಟ.
ಹಾಸನದ ಅಭಿಮಾನಿ ಕುಟುಂಬದಿಂದ ಪವರ್ ಸ್ಟಾರ್ ಗುಣಗಾನ - Appu fans made special song
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಎಲ್ಲೆಡೆ ಅಭಿಮಾನಿಗಳಿದ್ದಾರೆ. ಹಾಸನದ ಸರ್ವೇಶ್ ಹಾಗೂ ಕುಟುಂಬಕ್ಕೆ ಪುನೀತ್ ಎಂದರೆ ಬಹಳ ಇಷ್ಟ. ತಮ್ಮ ಮೆಚ್ಚಿನ ನಟನನ್ನು ಈ ಕುಟುಂಬ ಹಾಡಿನ ಮೂಲಕ ಹೊಗಳಿದ್ದಾರೆ.
ರಾಜ್ಯಾದ್ಯಂತ ಮಾತ್ರವಲ್ಲದೆ ಹೊರರಾಜ್ಯಗಳಲ್ಲೂ ಪುನೀತ್ಗೆ ಅಭಿಮಾನಿಗಳಿದ್ದಾರೆ. ಹಾಸನ ಜಿಲ್ಲೆ ಶ್ರವಣಬೆಳಗೊಳದ ಸರ್ವೇಶ್ ಜೈನ್ ಹಾಗೂ ಅವರ ಕುಟುಂಬದ ಎಲ್ಲಾ ಸದಸ್ಯರು ಪುನೀತ್ ಅಭಿಮಾನಿಗಳೇ. ಸವೇಶ್ ಪತ್ನಿ, ಮಗಳು, ಮಗ ನಾಲ್ವರಿಗೂ ಅಪ್ಪು ಎಂದರೆ ಅಚ್ಚುಮೆಚ್ಚು. ಪುನೀತ್ ನಮ್ಮ ಹೀರೋ, ಅವರು ಎಂದರೆ ನಮಗೆ ಪ್ರಾಣ ಎನ್ನುತ್ತದೆ ಈ ಕುಟುಂಬ.
ಸರ್ವೇಶ್ ಮೂಲತ: ಸಂಗೀತ ನಿರ್ದೇಶಕರು. ಭಕ್ತಿಗೀತೆ ಹಾಗೂ ಕೆಲವೊಂದು ಸಿನಿಮಾಗಳಿಗೆ ಸರ್ವೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದೀಗ ತಮ್ಮ ಮೆಚ್ಚಿನ ಪುನೀತ್ಗಾಗಿ ಅವರು ಹಾಡೊಂದನ್ನು ರೆಡಿ ಮಾಡಿದ್ದಾರೆ. ಅಪ್ಪುಗಾಗಿ ಅಭಿಮಾನಿ ಸಿದ್ಧಪಡಿಸಿರುವ ಈ ಹಾಡು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.