ಕರ್ನಾಟಕ

karnataka

ETV Bharat / sitara

ಹಸಿದ ಕಾರ್ಮಿಕರಿಗೆ ಫುಡ್​ ಕಿಟ್​ ವಿತರಿಸಿದ ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ - Harsika Poonchcha- Bhuvan Ponnanna distributed food kit for hungry workers

ರಾಜ್ಯದಲ್ಲಿ ಕೋವಿಡ್​ 2ನೇ ಅಲೆಯಿಂದ ಜನರ ಜೀವನ ಜರ್ಜರಿತವಾಗಿದೆ. ಇದೀಗ ಇದರ ನಿಯಂತ್ರಣಕ್ಕೆ ಮುಂದಾಗಿರುವ ಸರ್ಕಾರ ಕಠಿಣ ಲಾಕ್​ಡೌನ್​ ಮೊರೆ ಹೋಗಿದೆ. ಪರಿಣಾಮ ಜನರ ಜೀವನ ಮತ್ತಷ್ಟೂ ರೋಸಿ ಹೋಗಿದೆ. ಇಂತಹ ಸಮಯದಲ್ಲಿ ಹಸಿದವರ ನೆರವಿಗೆ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಮುಂದಾಗಿದ್ದಾರೆ.

harsika-poonchcha-bhuvan-ponnanna-distributed-food-kit-for-hungry-workers
ಹರ್ಷಿಕಾ ಪೂಣಚ್ಚಾ- ಭುವನ್ ಪೊನ್ನಣ್ಣ

By

Published : May 10, 2021, 9:32 PM IST

Updated : May 10, 2021, 9:42 PM IST

ಹೇಗಾದ್ರೂ ಮಾಡಿ ಕೊರೊನಾ 2ನೇ ಅಲೆಯನ್ನು ನಿಯಂತ್ರಣಕ್ಕೆ ತರಲೇಬೇಕೆಂಬ ಹಠದೊಂದಿಗೆ ಸರ್ಕಾರ ಕಠಿಣ ಲಾಕ್​ಡೌನ್​ ಮೊರೆ ಹೋಗಿದೆ. ಪರಿಣಾಮ ಜನ ಕೆಲಸವಿಲ್ಲದೇ ತಮ್ಮ ನಿತ್ಯದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವಲ್ಲಿಯೂ ಅಶಕ್ತರಾಗಿದ್ದಾರೆ. ಇಂತಹ ಸಂದರ್ಭವನ್ನು ಕಂಡು ಮರುಗಿರುವ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ತಮ್ಮ‌ ಕೈಲಾದ ಸಹಾಯವನ್ನ‌ ಮಾಡಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಹಸಿದ ಕಾರ್ಮಿಕರಿಗೆ ಫುಡ್​ ಕಿಟ್​ ವಿತರಿಸಿದ ಹರ್ಷಿಕಾ ಪೂಣಚ್ಚಾ- ಭುವನ್ ಪೊನ್ನಣ್ಣ

ಇದೀಗ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಜೊತೆಯಾಗಿ ಭುವನಂ ತಂಡದ ಅಡಿ ಆ ರೀತಿ ಕಷ್ಟದಲ್ಲಿರುವ ಅಶಕ್ತ ಜನರಿಗೆ ಫುಡ್ ಕಿಟ್‌ಗಳನ್ನು ಹಂಚುತ್ತಿದೆ.

ಇಲ್ಲಿನ ಸುಮಾರು 150 ಕೂಲಿ ಕಾರ್ಮಿಕ ಕುಟುಂಬಗಳಿಗೆ ಫುಡ್‌ ಕಿಟ್‌ಗಳನ್ನು ಹಂಚುವ ಮೂಲಕ ಸಹಾಯ ಹಸ್ತ ಚಾಚಿದ್ದು, ಈ ಫುಡ್‌ ಕಿಟ್‌ ಅಕ್ಕಿ, ಬೇಳೆ, ಸಕ್ಕರೆ, ಅಡುಗೆ ಎಣ್ಣೆ, ಗೋಧಿ ಹಿಟ್ಟು, ಮಸಾಲಾ ಪದಾರ್ಥಗಳು, ತರಕಾರಿಗಳನ್ನು ಒಳಗೊಂಡಿದೆ. ಭುವನಂ ತಂಡದ ವತಿಯಿಂದ ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಮಾಡುತ್ತಿರುವ ಈ ಸೇವೆಗೆ ಸಿನಿಮಾ ಇಂಡಸ್ಟ್ರಿ ಸೇರಿದಂತೆ, ಅಭಿಮಾನಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಓದಿ:ಕೊರೊನಾ ಕಷ್ಟ ಕಾಲದಲ್ಲಿ ಕೈ ಜೋಡಿಸಿ, ಬಡಜೀವಗಳನ್ನು ಉಳಿಸಲು ಸಹಕರಿಸಿ: ನಟ ಭುವನ್​ ಮನವಿ

Last Updated : May 10, 2021, 9:42 PM IST

For All Latest Updates

TAGGED:

ABOUT THE AUTHOR

...view details