ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಸದ್ಯ ಭೋಜಪುರಿ ಭಾಷೆಯ ಸಿನಿಮಾ ಒಂದರಲ್ಲಿ ನಟಿಸುತ್ತಿರುವುದು ಗೊತ್ತಿರುವ ಸಂಗತಿ. ಈ ಸಿನಿಮಾದ ಚಿತ್ರೀಕರಣಕ್ಕೆ ಲಂಡನ್‌ಗೆ ತರಳಿದ್ದು, ಇತ್ತೀಚೆಗೆ ಬೆಂಗಳೂರಿಗೆ ವಾಪಸಾಗಿದ್ದಾರೆ. ಇದ್ರಿಂದ ಕೆಲವರು ಹರ್ಷಿಕಾ ಮೇಲೆ ಆರೋಪ ಮಾಡಿದ್ದು, ನೀವು ಕ್ವಾರಂಟೈನ್ ನಿಯಮಗಳನ್ನು ಉಲ್ಲಘಿಸಿದ್ದೀರಾ ಎಂದಿದ್ದಾರೆ. ಈ ವಿಚಾರವಾಗಿ ವಿಡಿಯೋ ಒಂದನ್ನು ಮಾಡಿ ನಟಿ ಸ್ವಷ್ಟನೆ ನೀಡಿದ್ದಾರೆ.
"ನಾನು ಬೆಂಗಳೂರಿಗೆ ಬಂದು ಎರಡು ವಾರವಾಯ್ತು, ನನಗೆ ಕೊರೊನಾ ಇಲ್ಲ" - ನಾನು ಬೆಂಗಳೂರಿಗೆ ಬಂದು ಎರಡು ವಾರವಾಯ್ತು
ನಾನು ಲಂಡನ್‌ಗೆ ಹೋಗಿದ್ದಿದ್ದು ನಿಜ. ಆದರೆ ಲಂಡನ್‌ನಿಂದ ವಾಪಸ್ ಬಂದು ಈಗಾಗಲೇ ಎರಡು ವಾರಗಳು ಕಳೆದಿವೆ. ಆದರೆ ನಾನು ಇನ್ನೂ ಲಂಡನ್‌ನಲ್ಲಿಯೇ ಇದ್ದೇನೆ ಎಂದು ಕೆಲವರು ಹೇಳಿದ್ರೆ, ಮತ್ತೆ ಕೆಲವರು ಅದಾಗಲೇ ವಾಪಸಾಗಿದ್ದೇನೆ ಎಂದು ಸುದ್ದಿ ಮಾಡುತ್ತಿದ್ದಾರೆ. ಆದರೆ ನಾನು ಲಂಡನ್‌ನಿಂದ ವಾಪಸಾಗಿ ಎರಡು ವಾರ ಕಳೆದಿದೆ ಎಂದು ನಟಿ ಹರ್ಷಿಕಾ ಪೂಣಚ್ಚ ತಿಳಿಸಿದ್ದಾರೆ.
"ನಾನು ಬೆಂಗಳೂರಿಗೆ ಬಂದು ಎರಡು ವಾರವಾಯ್ತು: ನನಗೆ ಕೊರೊನಾ ಇಲ್ಲ"
ನಾನು ಲಂಡನ್‌ಗೆ ಹೋಗಿದ್ದಿದ್ದು ನಿಜ. ಆದರೆ ಲಂಡನ್‌ನಿಂದ ವಾಪಸ್ ಬಂದು ಈಗಾಗಲೇ ಎರಡು ವಾರಗಳು ಕಳೆದಿವೆ. ಆದರೆ ನಾನು ಇನ್ನೂ ಲಂಡನ್‌ನಲ್ಲಿಯೇ ಇದ್ದೇನೆ ಎಂದು ಕೆಲವರು ಹೇಳಿದ್ರೆ, ಮತ್ತೆ ಕೆಲವರು ಅದಾಗಲೇ ವಾಪಸಾಗಿದ್ದೇನೆ ಎಂದು ಸುದ್ದಿ ಮಾಡುತ್ತಿದ್ದಾರೆ. ಆದರೆ ನಾನು ಲಂಡನ್‌ನಿಂದ ವಾಪಸಾಗಿ ಎರಡು ವಾರ ಕಳೆದಿದೆ ಎಂದಿದ್ದಾರೆ.
ನಾನು ಕಳೆದ ಎರಡು ವಾರದಿಂದಲೂ ಬೆಂಗಳೂರಿನಲ್ಲಿಯೇ ಇದ್ದೇನೆ. ಅಲ್ಲದೆ ಫೋಟೋ ಶೂಟ್ ಸಹ ಮಾಡಿಸಿ ಎಲ್ಲರನ್ನು ಕರೆದಿದ್ದೆ. ದಯಮಾಡಿ ತಪ್ಪು ಸಂದೇಶ ರವಾನೆ ಮಾಡಬೇಡಿ ಎಂದು ನಟಿ ಹರ್ಷಿಕಾ ಹೇಳಿಕೊಂಡಿದ್ದಾರೆ.