‘ಉನ್ ಕಾದಲ್ ಇರುಂದಾಲ್’ ಎಂಬ ಸಿನಿಮಾದಲ್ಲಿ ಹರ್ಷಿಕಾ ಪೂಣಚ್ಚ ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೈಲರ್ನ್ನು ತಮಿಳಿನ ನಟರಾದ ಧನುಷ್, ವಿಜಯ್ ಸೇತುಪತಿ ಲಾಂಚ್ ಮಾಡಿದ್ದಾರೆ. ಕಳೆದ ವರ್ಷವೇ ಶುರುವಾಗಿದ್ದ ಉನ್ ಕಾದಲ್ ಇರುಂದಾಲ್ ಚಿತ್ರಣ ಆಲ್ ಮೋಸ್ಟ್ ಶೂಟಿಂಗ್ ಮುಗಿಸಿ ಇದೇ ತಿಂಗಳು 28ಕ್ಕೆ ರಿಲೀಸ್ ಆಗೋದಿಕ್ಕೆ ಡೇಟ್ ಫಿಕ್ಸ್ ಆಗಿದೆ.
ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ಕೊಡಗಿನ ಕುವರಿ! - Harshika Poonacha enter,
ಕನ್ನಡ ಚಿತ್ರರಂಗ ಅಲ್ಲದೇ ಕೊಂಕಣಿ, ಕೊಡವ, ತೆಲುಗು ಸಿನಿಮಾಗಳಲ್ಲಿ ಮಿಂಚಿರುವ ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ತಂದೆಯ ಅಕಾಲಿಕ ಮರಣದಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ಈಗ ಮತ್ತೆ ಬಣ್ಣ ಹಚ್ಚಿದ್ದು, ಹರ್ಷಿಕಾ ಪೂಣಚ್ಚ ತಮಿಳು ಸಿನಿಮಾದಲ್ಲಿ ನಟಿಸುವ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಯುವ ನಟ ಮುಕಾಬುಲಾ ಸಲ್ಮಾನ್ ಜೊತೆ ರೊಮ್ಯಾನ್ಸ್ ಮಾಡಿರೋ ಹರ್ಷಿಕಾ ಪೂಣಚ್ಚ, ತಮಿಳಿನ ಚೊಚ್ಚಲ ಚಿತ್ರ ರಿಲೀಸ್ ಆಗ್ತಾ ಇರೋದಿಕ್ಕೆ ಎಗ್ಸೈಟ್ ಆಗಿದ್ದಾರೆ. ಪ್ರತಿ ಕಲಾವಿದರಿಗೆ ಭಾಷೆ ಎಂಬುದು ಗಡಿ ಇರಬಾರದು. ನಟನೆಯೊಂದೇ ಎಲ್ಲದಕ್ಕೂ ಮಾನದಂಡ. ಒಳ್ಳೆಯ ಅವಕಾಶ ಸಿಕ್ಕರೆ ಯಾವ ಚಿತ್ರರಂಗದಲ್ಲಾದರೂ ನಾನು ನಟಿಸುತ್ತೇನೆ ಅಂತಾ ಹರ್ಷಿಕಾ ಪೂಣಚ್ಚ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವಂತೆ. ತಮಿಳಿನಲ್ಲಿ ಭರವಸೆ ನಿರ್ದೇಶಕ ಅಂತಾ ಕರೆಯಿಸಿಕೊಂಡಿರುವ ಹಷೀಮ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸದ್ಯ ಹರ್ಷಿಕಾ ಪೂಣಚ್ಚ ಅಭಿನಯದ ಚೊಚ್ಚಲ ತಮಿಳಿನ ಚಿತ್ರದ ನಿರೀಕ್ಷೆಯಲ್ಲಿದ್ದಾರೆ.