ಚಂದನವನದ ಚಿಟ್ಟೆ ಹರ್ಷಿಕಾ ಪೂಣಚ್ಚ ಸದ್ಯ ವಿಯೆಟ್ನಾಂ ಪ್ರವಾಸದಲ್ಲಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಟ್ರಿಪ್ ಅಂದ್ರೆ ಮೋಜು ಮಸ್ತಿ ಇದ್ದೇ ಇರುತ್ತದೆ. ಇಲ್ಲಿ ಹರ್ಷಿಕಾ ಪೂಣಚ್ಚ ಒಂದು ದೊಡ್ಡ ಧೈರ್ಯಕ್ಕೆ ಕೈ ಹಾಕಿದ್ದಾರೆ.
ಜನ ಬದುಕಿರುವ ಹಾವನ್ನು ನೋಡಿದರೆ ಸಾಕು ಭಯ ಪಡ್ತಾರೆ. ಯಾರಾದ್ರೂ ಮುಟ್ಟಲು ಮತ್ತು ಅದರ ಜೊತೆ ಆಟವಾಡಲು ಹೋಗುತ್ತಾರಾ? ಆದ್ರೆ, ಹರ್ಷಿಕಾ ಪೂಣಚ್ಚ ಇಂತಹದ್ದೊಂದು ಧೈರ್ಯ ತೋರಿದ್ದಾರೆ. ಹಾವನ್ನು ಅವರು ತನ್ನ ಮೈಮೇಲೆ ಬಿಟ್ಟುಕೊಂಡಿದ್ದಾರೆ.