ನಟನೆಯ ಜೊತೆಗೆ ನಿರ್ದೇಶಕರಾಗಿಯೂ ಜನಪ್ರಿಯರಾಗಿರುವ ಹರೀಶ್ ರಾಜ್ ಬಿಗ್ ಬಾಸ್ ಸ್ಪರ್ಧಿಯಾಗಿ ಕಿರುತೆರೆ ವೀಕ್ಷಕರಿಗೆ ತುಂಬಾ ಹತ್ತಿರವಾದವರು. ದೊಡ್ಮನೆಗೆ ಹೋಗಿದ್ದ ನಟ ಹರೀಶ್ ರಾಜ್ ಇದೀಗ ಮತ್ತೊಮ್ಮೆ ಕಿರುತೆರೆಗೆ ಹೊಸ ಅವತಾರದಲ್ಲಿ ಬರುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಮಜಾ ಭಾರತ ಹೊಸ ಸೀಸನ್ನಲ್ಲಿ ವಿಶೇಷ ಪಾತ್ರದಲ್ಲಿ ಹರೀಶ್ ರಾಜ್ ಕಾಣಿಸಿಕೊಳ್ಳಲಿದ್ದಾರೆ. ಆ ಮೂಲಕ ಮಗದೊಮ್ಮೆ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಲು ಹರೀಶ್ ರಾಜ್ ತಯಾರಾಗಿದ್ದಾರೆ.
ಮಜಾಭಾರತದ ಮೂಲಕ ನಕ್ಕು ನಗಿಸಲು ಬರುತ್ತಿದ್ದಾರೆ ಹರೀಶ್ ರಾಜ್ - harisha raj
ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಮಜಾ ಭಾರತ ಹೊಸ ಸೀಸನ್ನಲ್ಲಿ ವಿಶೇಷ ಪಾತ್ರದಲ್ಲಿ ಹರೀಶ್ ರಾಜ್ ಕಾಣಿಸಿಕೊಳ್ಳಲಿದ್ದಾರೆ. ಆ ಮೂಲಕ ಮಗದೊಮ್ಮೆ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಲು ಹರೀಶ್ ರಾಜ್ ತಯಾರಾಗಿದ್ದಾರೆ.
"ಮಜಾಭಾರತ ಹೊಸ ಸೀಸನ್ನ ಭಾಗವಾಗಿರುವುದಕ್ಕೆ ನನಗೆ ನಿಜವಾಗಿಯೂ ತುಂಬಾನೇ ಸಂತೋಷವಾಗುತ್ತಿದೆ. ಸದ್ಯ ಇದರ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದೇನೆ. ಇನ್ನು ನಾನು ಇದರಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ವಿಭಿನ್ನ ಪಾತ್ರಗಳ ಮೂಲಕ ನಿಮ್ಮನ್ನು ರಂಜಿಸಲು ಬರುವುದಂತೂ ಸತ್ಯ. ಅಜ್ಜ ಅಜ್ಜಿ, ಅಮ್ಮ ಅಪ್ಪ, ಅಂಕಲ್ ಆಂಟಿ ಹೀಗೆ ನಾನಾ ಅವತಾರಗಳ ಮೂಲಕ ನಿಮಗೆ ಮನರಂಜನೆ ನೀಡಲಿದ್ದೇನೆ" ಎನ್ನುತ್ತಾರೆ ಹರೀಶ್ ರಾಜ್.
ಅಂದ ಹಾಗೇ ಮಜಾಭಾರತದ ಮೊದಲ ಸಂಚಿಕೆಯಲ್ಲಿ ಬಿಗ್ ಬಾಸ್‌ನ ಶೈನ್ ಶೆಟ್ಟಿ, ಪ್ರಿಯಾಂಕಾ ಶಿವಣ್ಣ, ವಾಸುಕಿ ವೈಭವ್, ದೀಪಿಕಾ ದಾಸ್, ಭೂಮಿ ಶೆಟ್ಟಿ ಹಾಗೂ ಹರೀಶ್ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮುಗಿದ ನಂತರ ಮತ್ತೊಮ್ಮೆ ಸ್ಪರ್ಧಿಗಳೆಲ್ಲಾ ಜೊತೆಯಾಗಿ ಸೇರಿದ್ದೇವೆ ಎಂದು ಸಂತಸದಿಂದ ಹೇಳಿದ್ದಾರೆ ಹರೀಶ್ ರಾಜ್. ಭೂಮಿ ಶೆಟ್ಟಿ ನಿರೂಪಣೆಯಲ್ಲಿ ಮೂಡಿ ಬರಲಿರುವ ಈ ಕಾರ್ಯಕ್ರಮದಲ್ಲಿ ಗುರು ಕಿರಣ್ ಹಾಗೂ ರಚಿತಾ ರಾಮ್ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.