ಕರ್ನಾಟಕ

karnataka

ETV Bharat / sitara

ಬಿಗ್​ ಬಾಸ್​​ ಮನೆಯಿಂದ ಹರೀಶ್​​ ರಾಜ್​ ಔಟ್​ : ಇನ್ನುಳಿದ ಐವರು ಇವರೇ ನೋಡಿ - ಬಿಗ್​ ಬಾಸ್​​ ಮನೆಯಿಂದ ಹರೀಶ್​​ ರಾಜ್​ ಔಟ್​

106 ದಿನಗಳ ಕಾಲ ಬಿಗ್ ಬಾಸ್ ಮನೆಯ ಜರ್ನಿಯನ್ನು ಮುಗಿಸಿ ಮಿಡ್​ನೈಟ್​ ಎಲಿಮಿನೇಷನ್​ನಲ್ಲಿ ಹರೀಶ್ ರಾಜ್ ಹೊರ ಬಂದಿದ್ದಾರೆ. ಈ ಮೂಲಕ ವಾಸುಕಿ, ಶೈನ್​​, ಕುರಿ ಪ್ರತಾಪ್​​​, ಭೂಮಿ ಮತ್ತು ದೀಪಿಕಾ ಫಿನಾಲೆಗೆ ತಲುಪಿದ್ದಾರೆ.

harish raj out from big boss
ಬಿಗ್​ ಬಾಸ್​​ ಮನೆಯಿಂದ ಹರೀಶ್​​ ರಾಜ್​ ಔಟ್​

By

Published : Jan 28, 2020, 4:33 PM IST

ಅಂತೂ ಇಂತೂ ಬಿಗ್ ಬಾಸ್ ಮನೆಯಲ್ಲಿ ಮಿಡ್ ನೈಟ್ ಎಲಿಮಿನೇಷನ್ ನಡೆದೇ ಹೋಯಿತು. ಈ ಎಲಿಮಿನೇಷನ್ ಮೂಲಕ ಹೊರ ಬಂದವರು ಬೇರಾರು ಅಲ್ಲ. ಮನೆಯಲ್ಲಿ ಹಿರಿಯ ಸದಸ್ಯನಾಗಿದ್ದ ಹರೀಶ್ ರಾಜ್.

106 ದಿನಗಳ ಕಾಲ ಬಿಗ್ ಬಾಸ್ ಮನೆಯ ಜರ್ನಿಯನ್ನು ಮುಗಿಸಿ ಹರೀಶ್ ರಾಜ್ ಮನೆಯಿಂದ ಹೊರ ಬಂದಿದ್ದಾರೆ. ಈ ಮೂಲಕ ಫಿನಾಲೆಗೆ ತಲುಪುವ ಐದು ಮಂದಿ ಯಾರೆಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಈ ಹಿಂದೆ ವಾಸುಕಿ ವೈಭವ್, ಕುರಿ ಪ್ರತಾಪ್, ಶೈನ್ ಶೆಟ್ಟಿ ಫಿನಾಲೆಗೆ ತಲುಪಿದ್ರು. ಆದರೆ, ಭೂಮಿ ಶೆಟ್ಟಿ, ದೀಪಿಕಾ ದಾಸ್ ಹಾಗೂ ಹರೀಶ್ ರಾಜ್ ಅವರಲ್ಲಿ ನೇರ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಹರೀಶ್ ರಾಜ್ ಮನೆಯಿಂದ ಹೊರ ಬಂದಿದ್ದು, ಮನೆಯಲ್ಲಿ ವಾಸುಕಿ, ಶೈನ್​​, ಕುರಿ ಪ್ರತಾಪ್​​​, ಭೂಮಿ ಮತ್ತು ದೀಪಿಕಾ ಉಳಿದಿದ್ದಾರೆ.

ವೀಕ್ಷಕರಿಗೆ ಸೋಮವಾರ ರಾತ್ರಿಯವರೆಗೂ ವೋಟಿಂಗ್ ಲೈನ್ ಓಪನ್ ಆಗಿತ್ತು. ಸೋಮವಾರ ರಾತ್ರಿಯ ನಂತರ ಮಿಡ್​​ನೈಟ್ ಎಲಿಮಿನೇಷನ್ ನಡೆದಿದೆ. ಬಿಗ್ ಬಾಸ್ ಮನೆಯಲ್ಲಿ ಹರೀಶ್ ರಾಜ್ ಅವರು ಸುಮಾರು 106 ದಿನಗಳ ಕಾಲ ಇದ್ದು ಪ್ರೇಕ್ಷಕರನ್ನು ಸಾಕಷ್ಟು ರಂಜಿಸಿದ್ದಾರೆ. ಅವರ ಮಿಮಿಕ್ರಿ ಕೂಡ ಹೆಚ್ಚು ಗಮನ ಸೆಳೆದಿತ್ತು‌.

ಟಾಸ್ಕ್​​ಗಳಲ್ಲಿ ಹೆಚ್ಚಿನ ಪರಿಶ್ರಮ ಹಾಕಿ ಆಟವಾಡುತ್ತಿದ್ದರು. ನೈಟ್ ಎಲಿಮಿನೇಷನ್ ಆದ ಕಾರಣ ಹರೀಶ್ ಸುದೀಪ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಫಿನಾಲೆಯಲ್ಲಿ ಸುದೀಪ್​ ಜೊತೆ ಹರೀಶ್​ ವೇದಿಕೆ ಹಂಚಿಕೊಳ್ಳಲಿದ್ದಾರೆ..

ABOUT THE AUTHOR

...view details