ಹಿರಿತೆರೆ, ಕಿರುತೆರೆ ನಟ, ನಿರ್ದೇಶಕ, ಬಿಗ್ ಬಾಸ್ ಮಾಜಿ ಸ್ಪರ್ಧಿ ಹರೀಶ್ ರಾಜ್ ಮನೆಯಲ್ಲಿ ಇದೀಗ ಸಂಭ್ರಮದ ವಾತಾವರಣ ಇದೆ. ಹರೀಶ್ ರಾಜ್ ಎರಡನೇ ಮಗುವಿಗೆ ತಂದೆಯಾದ ಸಂಭ್ರಮದಲ್ಲಿದ್ದಾರೆ. ಹರೀಶ್ ರಾಜ್ ಪತ್ನಿ ಶ್ರುತಿ ಲೋಕೇಶ್ ಇಂದು ಮುಂಜಾನೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಎರಡನೇ ಮಗುವಿಗೆ ತಂದೆಯಾದ ಹರೀಶ್ ರಾಜ್ - Harish Raj news
ಕಿರುತೆರೆ ನಟ ಹರೀಶ್ ರಾಜ್ ಎರಡನೇ ಮಗುವಿಗೆ ತಂದೆಯಾದ ಸಂಭ್ರಮದಲ್ಲಿದ್ದಾರೆ. ಹರೀಶ್ ರಾಜ್ ಪತ್ನಿ ಶ್ರುತಿ ಲೋಕೇಶ್ ಇಂದು ಮುಂಜಾನೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಮಗದೊಮ್ಮೆ ತಂದೆಯಾದ ಖುಷಿಯಲ್ಲಿದ್ದಾರೆ ಹರೀಶ್ ರಾಜ್.
ಈಗಾಗಲೇ ಹರೀಶ್ ರಾಜ್ಗೆ ಸಾನಿಧ್ಯ ಎಂಬ ಹೆಣ್ಣು ಮಗುವೊಂದಿದ್ದು, ಇದೀಗ ಎರಡನೇ ಬಾರಿಯೂ ಪುಟ್ಟ ಲಕ್ಷ್ಮಿಯ ಆಗಮನವಾಗಿದೆ. ಈ ಖುಷಿಯ ವಿಚಾರವನ್ನು ಸ್ವತಃ ಹರೀಶ್ ರಾಜ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. "ಬ್ಲೆಸ್ಡ್ ವಿತ್ ಬೇಬಿ ಗರ್ಲ್… ನೀಡ್ ಆಲ್ ಯುವರ್ ಬ್ಲೆಸ್ಸಿಂಗ್ಸ್" ಎಂದು ಬರೆದುಕೊಂಡಿದ್ದಾರೆ. ಮುದ್ದು ಕಂದನ ಆಗಮನದಿಂದ ಖುಷಿಯಾಗಿರುವ ಹರೀಶ್ ರಾಜ್ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಇತ್ತೀಚೆಗಷ್ಟೇ ಹರೀಶ್ ರಾಜ್ ತಾವು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂಬ ವಿಚಾರವನ್ನು ಬಹಿರಂಗಗೊಳಿಸಿದ್ದರು. ಇದೀಗ ಎರಡನೇ ಮಗಳ ಆಗಮನದಿಂದ ಫುಲ್ ಖುಷಿಯಾಗಿದ್ದಾರೆ ಹರೀಶ್ ರಾಜ್. ಅಂದಹಾಗೆ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ಮೋಡಿ ಮಾಡಿದ್ದ ಹರೀಶ್ ರಾಜ್ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಾರ್ಯಕ್ರಮ ಮಜಾ ಭಾರತದಲ್ಲಿ ವಿಭಿನ್ನ ಪಾತ್ರದ ಮೂಲಕ ಪ್ರತಿ ವಾರವೂ ಗಮನ ಸೆಳೆಯುತ್ತಾರೆ.