ಕನ್ನಡದ ನಟ ಹರೀಶ್ ರಾಜ್ ಸೈರಾ ನರಸಿಂಹ ರೆಡ್ಡಿ ಚಿತ್ರಕ್ಕೆ ಕಂಠದಾನ ಮಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
'ಸೈರಾ ನರಸಿಂಹ ರೆಡ್ಡಿ' ಚಿತ್ರಕ್ಕೆ ಕಂಠದಾನ ಮಾಡಿದ ನಟ ಹರೀಶ್ ರಾಜ್.. - ಸೈರಾ ನರಸಿಂಹ ರೆಡ್ಡಿಗೆ ಕಂಠದಾನ
ಖ್ಯಾತ ನಟರಲ್ಲಿ ಒಬ್ಬರಾದ ಹರೀಶ್ ರಾಜ್ ಈಗ ತೆಲುಗಿನ ಬಹು ನಿರೀಕ್ಷಿತ ಹಾಗೂ ದೊಡ್ಡ ತಾರಾಗಣ ಹೊಂದಿರುವ ಚಿತ್ರವೊಂದಕ್ಕೆ ಕಂಠದಾನ ಮಾಡಿದ್ದಾರೆ.
ಮೆಗಾ ಸ್ಟಾರ್ ಚಿರಂಜೀವಿ ಅವರ ತೆಲುಗು ಸಿನಿಮಾ ಬಹು ದೊಡ್ಡ ತಾರಾಗಣ ಹೊಂದಿದೆ. ಅಮಿತಾಬ್ ಬಚ್ಚನ್, ಸುದೀಪ್ ಸಹ ಈ ಚಿತ್ರದಲ್ಲಿದ್ದಾರೆ. ಈ ಸಿನಿಮಾ ಹಲವು ಭಾಷೆಗಳಿಗೆ ಡಬ್ ಆಗುತ್ತಿದೆ. ಕನ್ನಡದಲ್ಲಿ ಡಬ್ ಆಗುತ್ತಿರುವ ಈ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಪಾತ್ರವೊಂದಕ್ಕೆ ಜನಪ್ರಿಯ ನಟ ಹರೀಶ್ ರಾಜ್ ತಮ್ಮ ಕಂಠದಾನ ಮಾಡಿದ್ದಾರೆ. ಈಗ ಬಿಡುಗಡೆ ಆಗಿರುವ ಸೈರಾ ನರಸಿಂಹ ರೆಡ್ಡಿ ಟೀಸರ್‌ನಲ್ಲಿ ಹರೀಶ್ ರಾಜ್ ಧ್ವನಿ ಕಂಡು ಬಂದಿದೆ. ಡಬ್ ಮಾಡಿರುವುದಾಗಿ ಹರೀಶ್ ರಾಜ್ ಸಹ ಸಂತೋಷವಾಗಿ ಹೇಳಿಕೊಂಡಿದ್ದಾರೆ. ಈವರೆಗೂ 30 ಪರಭಾಷಾ ನಟರುಗಳು ಕನ್ನಡದಲ್ಲಿ ಅಭಿನಯಿಸಿದ ಪಾತ್ರಕ್ಕೆ ನಾನು ಧ್ವನಿ ನಿಡಿದ್ದೇನೆ ಎಂದಿದ್ದಾರೆ.
ಹರೀಶ್ ರಾಜ್ ಧ್ವನಿ ನೀಡಿರುವುದು ತಮಿಳಿನ ಜನಪ್ರಿಯ ನಟ ವಿಜಯ್ ಸೇತುಪತಿ ಅವರ ಭಾಗಕ್ಕೆ. ಅಂತಹ ದೊಡ್ಡ ದಕ್ಷಿಣ ಭಾರತದ ಚಿತ್ರಕ್ಕೆ ನಾನು ಧ್ವನಿ ನೀಡಿರುವುದು ಹೆಮ್ಮೆಯ ವಿಚಾರ ಎಂದು ಭಾವಿಸಿದ್ದಾರೆ. ನಾಯಕ ನಟ ಹರೀಶ್ ರಾಜ್ ನಟನೆಯ ‘ಕಿಲಾಡಿ ಪೊಲೀಸ್’ ಶೀಘ್ರವೇ ಬಿಡುಗಡೆ ಆಗುತ್ತಿದ್ದು, ಅವರ ಸಿನಿಮಾ ಬಹು ಭಾಷಾ ಹಾಗೂ ಬಹು ತಾರಾಗಣದ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಎದುರು ಪೈಪೋಟಿ ಎದುರಿಸಬೇಕಾಗಲೂಬಹುದು.