ಸ್ಯಾಂಡಲ್ವುಡ್ ಬ್ಯೂಟಿಗಳಲ್ಲಿ ಸದ್ಯಕ್ಕೆ ಬ್ಯುಸಿ ಇರುವ ನಟಿಯರೆದಂದರೆ ಹರಿಪ್ರಿಯಾ, ರಚಿತಾ ರಾಮ್, ಅದಿತಿ ಪ್ರಭುದೇವ ಅಂತ ಹೇಳಿದ್ರೆ ತಪ್ಪಾಗಲ್ಲ. ಅದ್ರಲ್ಲೂ ಹರಿಪ್ರಿಯಾ ಕೈಗೆ ಸಿನಿಮಾಗಳು ಸಿಕ್ಕರೂ ನಟಿಸಲು ಸಮಯವಿಲ್ಲದೆ ಆ ಸಿನಿಮಾವನ್ನು ಕೈಚೆಲ್ಲಿದ್ದೂ ಉಂಟು. ಇತ್ತೀಚೆಗೆ ಕಸ್ತೂರಿ ಮಹಲ್ ಚಿತ್ರದಲ್ಲಿ ನಟಿಸಲು ಸಮಯವಿಲ್ಲ ಎಂದು ಹೇಳಿರುವುದೇ ಇದಕ್ಕೆ ಸಾಕ್ಷಿ. ಹಾಗಾದ್ರೆ ನೀರ್ದೋಸೆ ಬೆಡಗಿ ಕೈಲಿ ಎಷ್ಟು ಸಿನಿಮಾಗಳಿವೆ ಅಂದ್ರಾ.. ಬರೋಬ್ಬರಿ ಆರು ಚಿತ್ರಗಳು ಹರಿಪ್ರಿಯ ಕೈಯಲ್ಲಿವೆಯಂತೆ.
ಸದ್ಯ ಹರಿಪ್ರಿಯಾರ ಸಿನಿಮಾಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ ತಲಾ ಒಂದೊಂದು ಸೆಟ್ಟೇರಿವೆ. ಬೆಂಗಳೂರಿನಲ್ಲಿ ದಿಗಂತ್ ಜೊತೆಗಿನ ಸಿನಿಮಾವಾದ್ರೆ, ಮೈಸೂರಿನಲ್ಲಿ ಸತೀಶ್ ನೀನಾಸಂ ಜೊತೆಗಿನ ‘ಪೆಟ್ರೋಮ್ಯಾಕ್ಸ್’. ‘ಪೆಟ್ರೋಮ್ಯಾಕ್ಸ್’ಚಿತ್ರದಲ್ಲಿ ಮನೆ ಬ್ರೋಕರ್ ಪಾತ್ರಕ್ಕೆ ಹರಿಪ್ರಿಯಾ ಬಣ್ಣ ಹಚ್ಚುತ್ತಿದ್ದಾರೆ.