ಕೆಲವು ದಿನಗಳಿಂದ ತಟಸ್ಥವಾಗಿದ್ದ ಚಿತ್ರರಂಗದ ಚಟುವಟಿಕೆಗಳು ನಿಧಾನವಾಗಿ ಆರಂಭವಾಗುತ್ತಿವೆ. ಈ ನಡುವೆ ಕನ್ನಡ ಖ್ಯಾತ ನಟಿಯರು ಕೂಡಾ ವೆಬ್ ಸೀರೀಸ್ನತ್ತ ಮುಖ ಮಾಡುತ್ತಿರುವುದು ವಿಶೇಷವಾಗಿದೆ. ಇದೊಂದು ಟ್ರೆಂಡ್ ಕೂಡಾ ಆಗುತ್ತಿದೆ.
ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕೆಲವೇ ಕೆಲವು ನಟಿಯರಲ್ಲಿ ಹರಿಪ್ರಿಯ ಕೂಡಾ ಒಬ್ಬರು. ಇದೀಗ ಹರಿಪ್ರಿಯ ಅವರಿಗೆ ಕೂಡಾ ವೆಬ್ ಸೀರೀಸ್ನಲ್ಲಿ ನಟಿಸಲು ನಿರ್ದೇಶಕರು ಆಹ್ವಾನಿಸಿದ್ದು ಹರಿಪ್ರಿಯ ಕೂಡಾ ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಸುಮಾರು 25 ಸಿನಿಮಾಗಳಲ್ಲಿ ನಟಿಸಿರುವ ಹರಿಪ್ರಿಯ ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಉಪೇಂದ್ರ ಹಾಗೂ ದಿಗಂತ್ ಜೊತೆ ಅವರು ಎರಡು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.