ಇತ್ತೀಚೆಗೆ ನೋಯ್ಡಾದಲ್ಲಿ ನಡೆದ 4ನೇ ಭಾರತೀಯ ವಿಶ್ವ ಸಿನಿಮಾ ಉತ್ಸವದಲ್ಲಿ ಹರಿಪ್ರಿಯಾಗೆ ಉತ್ತಮ ನಟಿ ಪ್ರಶಸ್ತಿ ಲಭಿಸಿದೆ. ಈ ಚಿತ್ರೋತ್ಸವದಲ್ಲಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಅಮೃತಮತಿ ಸಿನಿಮಾ ಕೂಡ ಸ್ಪರ್ಧೆ ನಡೆಸಿದ್ದು, ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸಿರುವ ಹರಿಪ್ರಿಯಾಗೆ ಉತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.
ಇದೇ ಮಾರ್ಚ್ 8ರಂದು ನಡೆದಿದ್ದ ಸಿನಿಮೋತ್ಸವದಲ್ಲಿ ಬ್ರಿಟನ್, ಚೀನಾ, ಕೊರಿಯಾ, ಅರ್ಜೆಂಟೈನಾ, ಟರ್ಕಿ ಸೇರಿದಂತೆ ಹಲವು ರಾಷ್ಟ್ರಗಳ ಸಿನಿಮಾಗಳು ಪ್ರದರ್ಶನಗೊಂಡಿದ್ದವು.
ಅಮೃತಮತಿ ಸಿನಿಮಾ 13ನೇ ಶತಮಾನದ ಜನ್ನ ರಚಿಸಿದ ‘ಯಶೋಧರ ಚರಿತೆ’ಯಲ್ಲಿ ಬರುವ ‘ಅಮೃತಮತಿ’ ಕಥೆಯಾಗಿದೆ. ಪ್ರೊ. ಬರಗೂರು ರಾಮಚಂದ್ರಪ್ಪ ಈ ಕಥಾ ವಸ್ತುವನ್ನು ಭೋಗ-ಸುಖ, ಬಂಧನ-ಬಿಡುಗಡೆ, ಪ್ರಭುತ್ವ-ಜನತೆ ಎಂಬ ವೈರುಧ್ಯಗಳ ಮುಖಾಂತರ ತೆರೆ ಮೇಲೆ ತಂದಿದ್ದಾರೆ.
ಹರಿಪ್ರಿಯಾ ಮತ್ತು ಕಿಶೋರ್ ಇಂಚರ ಪುಟ್ಟಣ್ಣ ಪ್ರೊಡಕ್ಷನ್ ಅಡಿಯಲ್ಲಿ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಚಿತ್ರದಲ್ಲಿ ಹರಿಪ್ರಿಯಾ, ಕಿಶೋರ್, ತಿಲಕ್, ಸುಪ್ರಿಯ ರಾವ್, ಅಂಬರೀಶ್ ಸಾರಂಗಿ, ಸುಂದರ್ ರಾಜ್, ಪ್ರಮಿಳ ಜೋಶೈ, ವತ್ಸಲಾ ಮೋಹನ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.