ಕರ್ನಾಟಕ

karnataka

ETV Bharat / sitara

ವೈರಲ್​ ಆಗ್ತಿದೆ ನೀರ್​​​​​​ದೋಸೆ ಹುಡುಗಿ ಅಧರ ಚುಂಬನ ದೃಶ್ಯದ ಮೀಮ್​ಗಳು..!

ಹರಿಪ್ರಿಯಾ ಹಾಗೂ ಸೃಜನ್ ಲೋಕೇಶ್ ನಟಿಸಿರುವ 'ಎಲ್ಲಿದ್ದೆ ಇಲ್ಲಿತನಕ' ಸಿನಿಮಾದ ಟ್ರೇಲರನ್ನು ನಟ ದರ್ಶನ್ ಇಂದು ಬಿಡುಗಡೆಗೊಳಿಸಿದ್ದಾರೆ. ಇನ್ನು ಚಿತ್ರದ ಟೈಟಲ್ ಹಾಡಿನಲ್ಲಿ ಬರುವ ಹರಿಪ್ರಿಯಾ, ಸೃಜನ್​​​​ ಚುಂಬನದ ದೃಶ್ಯ ಪೋಟೋಗಳು ಟ್ರೋಲ್ ಆಗುತ್ತಿವೆ.

ನೀರ್​​​​​​ದೋಸೆ

By

Published : Sep 20, 2019, 6:44 PM IST

Updated : Sep 20, 2019, 6:52 PM IST

ಕೆಲವು ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಡುವಿನ 'ಗೀತಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಸಿನಿಮಾಗಳ ಲಿಪ್ ಲಾಕ್​ ದೃಶ್ಯದ ವಿಡಿಯೋ ವೈರಲ್ ಆಗಿತ್ತು. ಇದೀಗ ನೀರ್​​ದೋಸೆ ಬ್ಯೂಟಿ ಹರಿಪ್ರಿಯಾ ಚುಂಬನದ ದೃಶ್ಯದ ಫೋಟೋಗಳು ವೈರಲ್ ಜೊತೆಗೆ ಟ್ರೋಲ್ ಆಗುತ್ತಿದೆ.

ಟ್ರೋಲ್ ಆಗಿರುವ ಕಿಸ್ಸಿಂಗ್ ದೃಶ್ಯ

ಹರಿಪ್ರಿಯಾ ಮೊದಲ ಬಾರಿಗೆ ಸೃಜನ್ ಲೋಕೇಶ್ ಜೊತೆ ನಟಿಸಿರುವ ಸಿನಿಮಾ 'ಎಲ್ಲಿದ್ದೆ ಇಲ್ಲಿತನಕ'. ಕೆಲವು ದಿನಗಳ ಹಿಂದೆ ಚಿತ್ರದ ಟೈಟಲ್ ಸಾಂಗ್ ಬಿಡುಗಡೆಯಾಗಿತ್ತು. ಈ ಹಾಡಿನಲ್ಲಿ ಹರಿಪ್ರಿಯಾ ಬೋಲ್ಡ್ ಆಗಿ ನಟಿಸಿದ್ದಾರೆ. ಈ ಹಾಡಿನಲ್ಲಿ ಬರುವ ಬೆಡ್​​​ರೂಮ್ ದೃಶ್ಯದಲ್ಲಿ ಹರಿಪ್ರಿಯಾ ಸೃಜನ್​​​ಗೆ ಕಿಸ್ ಮಾಡಿದ್ದಾರೆ. ಈ ದೃಶ್ಯದ ಮೀಮ್​ಗಳು ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಬಹಳ ವರ್ಷಗಳ ನಂತರ ಸೃಜನ್ ಲೋಕೇಶ್ ಬ್ರೇಕ್​​​ಗಾಗಿ ಕಾಯುತ್ತಿದ್ದಾರೆ. ಲೋಕೇಶ್ ಪ್ರೊಡಕ್ಷನ್ ಬ್ಯಾನರ್ ಅಡಿ ಸೃಜನ್ ಲೋಕೇಶ್ ಅವರೇ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ತೇಜಸ್ವಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದು ಅಕ್ಟೋಬರ್ 11 ಸಿನಿಮಾ ತೆರೆ ಕಾಣಲಿದೆ.

Last Updated : Sep 20, 2019, 6:52 PM IST

ABOUT THE AUTHOR

...view details